ಎಲ್ಲೆಡೆ ಬಸವ ಜಯಂತಿ ಆಚರಣೆಗೆ ಕ್ರಮವಾಗಲಿ

7Ndr1A
Published on

ನಂದೇಶ್ವರ: ಎಲ್ಲ ರಾಜ್ಯಗಳಲ್ಲಿ ಬಸವ ಜಯಂತಿ ಆಚರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸವದಿ ಇಳಕಲ್ ಮಠದ ಶ್ರೀಗುರು ಮಹಾಂತ ಸ್ವಾಮೀಜಿ ಹೇಳಿದರು.

ಸಮೀಪದ ಸವದಿ ಗ್ರಾಮದ ಸಾರವಾಡ ತೋಟದಲ್ಲಿ ಶ್ರೀ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಬಸವಣ್ಣ ಅವರನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಬಾರದು. ಸಾರವಾಡ ಮನೆತನ ಅನೇಕ ವರ್ಷಗಳಿಂದ ಶ್ರೀ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರುತ್ತಿರುವುದು ಅವರ ಕಾಯಕ ದಾಸೋಹ ನಿಷ್ಠೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಡಾ.ಬಸವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ವಿರತೇಶಾನಂದ ಸ್ವಾಮೀಜಿ, ಯಶವಂತ ದೇವರು, ಗ್ರಾಪಂ ಅಧ್ಯಕ್ಷೆ ಬಿಸ್ಮಿಲ್ಲಾ ಬೆಳ್ಳುಬ್ಬಿ, ಮಲ್ಲನಗೌಡ ಪಾಟೀಲ, ಸದಾಶಿವ ಸಾರವಾಡ, ನಿಂಗಪ್ಪ ಸಾರವಾಡ, ರಾಯಪ್ಪ ಜಿವೋಜಿ, ಮಹಾಂತೇಶ ಸಾರವಾಡ, ಪ್ರಕಾಶ ಪಾಟೀಲ, ಬಸವರಾಜ ಸಾರವಾಡ, ಭೀಮಣ್ಣ ಅಥಣಿ, ಡಾ.ಶ್ರೀಶೈಲ ಕೊಪ್ಪದ, ಮಹೇಶ ಮಠದ, ಅದೃಷಿ ಪಾಟೀಲ, ಮಲ್ಲಿಕಾರ್ಜುನ ಠಕ್ಕನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net