

ಕಲಬುರಗಿ: ನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ಹೋಳಿ ಹಬ್ಬದ ಬಣ್ಣದಾಟ ಸಡಗರ, ಸಂಭ್ರಮದೊAದಿಗೆ ಶಾಂತಿಯುತವಾಗಿ ಹಬ್ಬ ಆಚರಿಸಲಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಣ್ಣದಾಟದಲ್ಲಿ ಜನ ಮಿಂದೆದ್ದರು. ಯುವಕರು, ಯುವತಿಯರು ಬಣ್ಣದಾಟದಲ್ಲಿ ತೊಡಗಿದ್ದು, ಗಮನ ಸೆಳೆಯಿತು.
ಗುರುವಾರ ತಡರಾತ್ರಿವರೆಗೆ ಕಾಮದಹನ ಮಾಡಿದ್ದ ಯುವಕರು ಶುಕ್ರವಾರ ಸೂರ್ಯೋದಯದೊಂದಿಗೆ ರಂಗಿನಾಟದಲ್ಲಿ ತೊಡಗಿದರು. ತಮ್ಮ ಬಡಾವಣೆ, ಓಣಿ, ವಠಾರದಲ್ಲಿನ ಸ್ನೇಹಿತರಿಗೆ ಪರಸ್ಪರ ಸಂಭ್ರಮಿಸಿದರು. ಬೊಬ್ಬೆ ಹಾಕುತ್ತ, ಕಾಮನ ಗೀತೆ ಹಾಡುತ್ತ ಸಂಭ್ರಮಿಸಿದರು.
ನಗರದ ನೆಹರು ಗಂಜ್, ಶಹಾಬಜಾರ್, ಆಳಂದ ನಾಕಾ, ಆಳಂದ ಚೆಕ್‌ಪೋಸ್ಟ್, ಸೂಪರ್ ಮಾರ್ಕೆಟ್, ಜಗತ್ ಬಡಾವಣೆ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಸೇಡಂ ರಸ್ತೆ, ಬಿಲಗುಂದಿ ಸರ್ಕಲ್, ಜೇವರ್ಗಿ ರಸ್ತೆಯ ರಾಮ ಮಂದಿರ, ಬ್ರಹ್ಮಪುರ, ಮಹಾಂತ ನಗರ, ಖೂಬಾ ಪ್ಲಾಟ್, ವಿಠ್ಠಲ್ ನಗರ, ಸಂಗಮೇಶ್ವರ ಕಾಲನಿ, ಗೋದುತಾಯಿ ನಗರ, ನ್ಯೂ ರಾಘವೇಂದ್ರ ಕಾಲನಿ, ಕರುಣೇಶ್ವರ ನಗರ, ಓಂ ನಗರ, ವಿಶ್ವೇಶ್ವರಯ್ಯ ನಗರ, ರೇವಣಸಿz್ದೆÃಶ್ವರ ಕಾಲನಿ, ಗಾಂಧಿ ನಗರ, ಸುವರ್ಣ ನಗರ, ಜೆಆರ್ ನಗರ, ಕೈಲಾಸ ನಗರ ಸೇರಿ ನಗರಾದ್ಯಂತ ಯುವಕರು, ಮಕ್ಕಳು, ಮಹಿಳೆಯರು ಬಣ್ಣವಾಡಿದರು.
ಅಘೋಷಿತ ಬಂದ್ ವಾತಾವರಣ: ರಂಗಿನಾಟದ ನಿಮಿತ್ತ ನಗರದ ಬಹುತೇಕ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು. ಮುಖ್ಯರಸ್ಥೆಗಳಲ್ಲಿ ಬಣ್ಣ ಎರಚಿಕೊಂಡು ಬೈಕ್‌ಗಳ ಮೇಲೆ ಯುವಕರು ಓಡಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ವಿವಿಧೆಡೆ ಸೌಂಡ್ ಸಿಸ್ಟಮ್‌ಗಳನ್ನು ಅಳವಡಿಸಿ, ಕುಣಿದು ಕುಪ್ಪಳಿಸಿದರು. ಹೆಚ್ಚಿನ ಹೋಟೆಲ್‌ಗಳು ಬಂದ್ ಇದ್ದವು. ಹೀಗಾಗಿ ಅಲ್ಲಲ್ಲಿ ಕೆಲವೆಡೆ ಸಿಗುತ್ತಿದ್ದ ಆಲುಭಾತ್, ಮಿರ್ಚಿ, ಭಜಿ, ಆಮ್ಲೆಟ್ ತಿನ್ನಲು ಜನ ಮುಗಿಬಿದ್ದಿದ್ದರು. ಹಬ್ಬದ ಆಚರಣೆಯಲ್ಲಿ ಮಹಿಳೆಯರು, ಯುವತಿಯರು ಜಿದ್ದಿಗೆ ಬಿದ್ದಂತೆ ಬಣ್ಣವಾಡಿದರು. ಪರಸ್ಪರ ರಂಗು ಬಳಿದು, ಓಕುಳಿ ಎರಚುವ ಮೂಲಕ ಹಬ್ಬದಲ್ಲಿ ಭಾಗಿಯಾದರು.