ಎಲ್ಲೆಡೆ ನಾಗರಪಂಚಮಿ ಹಬ್ಬದ ಸಂಭ್ರಮ

prashant nagar
Published on

ಕಲಬುರಗಿ: ನಾಗರ ಪಂಚಮಿ ಹಬ್ಬವನ್ನು ನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ಶ್ರದ್ಧಾ ಭಕ್ತಿ ಜತೆಗೆ ಸಡಗರ ಸಂಭ್ರಮದಿAದ ಆಚರಿಸಲಾಯಿತು. ಎಲ್ಲೆಡೆ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ನಾಗದೇವರ ಪೂಜೆ ಮಾಡಿ ಮಹಿಳೆಯರು ಭಕ್ತಿ ಮೆರೆದರು. ನಾಗರಪಂಚಮಿ ಜತೆಗೆ ಶ್ರಾವಣದ ಮೊದಲ ಶುಕ್ರವಾರದ ಮಹಾಲಕ್ಷಿö್ಮÃ ಪೂಜೆಯು ಭಕ್ತಿಯನ್ನು ಇಮ್ಮಡಿಗೊಳಿಸಿತು.
ನಾಡಿಗೆ ದೊಡ್ಡ ಹಬ್ಬ ಎಂದು ಕರೆಸಿಕೊಳ್ಳುವ ನಾಗರಪಂಚಮಿಯನ್ನು ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪP್ಷÀದ ಐದನೇ ದಿನ ಆಚರಿಸಲಾಗುತ್ತದೆ. ಹಬ್ಬದ ಮುನ್ನ ದಿನ ಗುರುವಾರ ಎಲ್ಲ ಮನೆಗಳಲ್ಲಿ ನಾಗಪ್ಪನಿಗೆ ಬೆಲ್ಲದ ಹಾಲು ಎರೆಯಲಾಯಿತು. ಮಹಿಳೆಯರು ದಿನವಿಡೀ ಉಪವಾಸವಿದ್ದು, ಸಂಜೆ ವ್ರತ ಪೂರ್ಣಗೊಳಿಸಿ ಖರ್ಚಿಕಾಯಿ, ಶೇಂಗಾ, ಅಂಟಿನ ಉಂಡೆ, ರವೆ ಉಂಡೆ, ಕಡಲೆ, ಹೆಸರಿನ ಗುಗ್ಗರಿ, ಸಾಬೂದಾನಿ ಮೊದಲಾದ ಮಿಶ್ರಣದಿಂದ ತಯಾರಿಸಿದ ನೈವೇದ್ಯವನ್ನು ದೇವರಿಗೆ ಸಮರ್ಪಿಸಿದ ಬಳಿಕ ಆಪ್ತರೊಂದಿಗೆ ಸೇವಿಸಿದರು.
ಶುಕ್ರವಾರ ಬೆಳಗ್ಗೆ ಹೆಂಗಳೆಯರು ಮತ್ತು ಮಕ್ಕಳು ಸ್ನಾನ ಮಾಡಿ ಮನೆಯಲ್ಲಿ ಕುಲದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸಮೀಪದ ನಾಗರಕಟ್ಟೆ, ನಾಗ ದೇವತೆ ದೇವಾಲಯಗಳಿಗೆ ತೆರಳಿ ನಾಗದೇವರಿಗೆ ಹಾಲು ಎರೆದರು. ಕೆಲವೆಡೆ ಹುತ್ತಕ್ಕೆ ಹಾಲೆರೆದು ಭಕ್ತಿ ಮೆರೆದರಲ್ಲದೆ ಕಡಲೆ ಕಡುಬು ನೈವೇದ್ಯ ಅರ್ಪಿಸಿದರು.
ಬ್ರಹ್ಮಪುರ, ಅಪ್ಪನ ಗುಡಿಯಲ್ಲಿರುವ ನಾಗದೇವತೆ, ಗೋದುತಾಯಿ ನಗರದ ಶಿವ ಮಂದಿರ ನಾಗದೇವತೆ ಕಟ್ಟೆ, ಮಹಾಂತ ನಗರದ ನಾಗದೇವತೆ ಗುಡಿ, ಕರುಣೇಶ್ವರ ನಗರ, ಜಯನಗರ, ಓಂನಗರ, ಶಹಾಬಜಾರ, ನೆಹರು ಗಂಜ್, ಖೂಬಾ ಪ್ಲಾಟ್, ಸಂಗಮೇಶ್ವರ ಕಾಲನಿ, ವಿದ್ಯಾನಗರ, ದೇವಿಗರ, ವೆಂಕಟೇಶ ನಗರ, ಸದಾಶಿವ ನಗರ, ಎನ್‌ಜಿಒ ಕಾಲನಿ, ರೇವಣಸಿz್ದÉÃಶ್ವರ ನಗರ, ಆಳಂದ ಕಾಲನಿ, ಸಂತೋಷ ಕಾಲನಿ, ವೀರಭದ್ರೇಶ್ವರ ಕಾಲನಿ, ರಾಜಾಪುರ, ಕೋಟನೂರ, ಕಪನೂರ, ಉದನೂರ ಮೊದಲಾದ ಕಡೆ ನಾಗ ದೇವರ ವಿಗ್ರಹಗಳಿಗೆ ಮಹಿಳೆಯರು ಮತ್ತು ಮಕ್ಕಳು ಹಾಲೆರೆದು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಈ ಹಬ್ಬದಂದು ನಾಗದೇವತೆಯೊಂದಿಗೆ ಶಿವನನ್ನು ಪೂಜಿಸುವುದರಿಂದ ಮನೆಗಳಲ್ಲಿ ಧನ-ಧಾನ್ಯಗಳಿಗೆ ಕೊರತೆ ಆಗುವುದಿಲ್ಲ. ಜತೆಗೆ ದುಷ್ಟ ಶಕ್ತಿಗಳಿಂದ ರP್ಷÀಣೆ ಸಿಗಲಿದೆ ಎಂಬ ನಂಬಿಕೆ ಇದೆ. ಕೆಲವೆಡೆ ಜನರು ತಮ್ಮ ಮನೆ ಗೋಡೆಯ ಮೇಲೆ ಹಾವಿನ ಚಿತ್ರ ಬಿಡಿಸಿ ಪೂಜಿಸಿದರು. ಇನ್ನೂ ಕೆಲವೆಡೆ ಹತ್ತಿರದ ನಾಗ ಸನ್ನಿಧಾನಕ್ಕೆ ತೆರಳಿ ದರುಶನ ಪಡೆದು ಭಕ್ತಿ ಸಮರ್ಪಿಸಿದರು.

ದೇಸಿ ಆಟಗಳಿಗೆ ಸ್ಪರ್ಧೆ ಮೆರಗು…
ನಾಗಪಂಚಮಿಯAದು ದೇಶಿ ಆಟಗಳಿಗೆ ಎಲ್ಲೆಡೆ ಮೆರಗು ದೊರೆಯಿತು. ಮಹಿಳೆಯರು ಮರಗಳಿಗೆ, ಮನೆಯಲ್ಲಿ ಜೋಕಾಲಿ ಕಟ್ಟಿ ಆಡಿ ಸಂಭ್ರಮಿಸಿದರು. ಮತ್ತೊಂದೆಡೆ ಎಲ್ಲೆಡೆ ಯುವಕರು ದೇಸಿ ಆಟಗಳಾದ ಲಿಂಬೆ ಹಣ್ಣು, ಟೆಂಗಿನಕಾಯಿ ಎಸೆತ, ಕಣ್ಣು ಕಟ್ಟು ಆಟ, ಕಬ್ಬಡ್ಡಿ, ಗುಂಡು ಕಲ್ಲು ಎತ್ತುವ ಸ್ಪರ್ಧೆ, ಹಣ ಚಿಮ್ಮಿಸುವ ಆಟ ಸೇರಿ ಹಲವು ದೇಸಿ ಸ್ಪರ್ಧೆಗಳನ್ನು ನಡೆಸಿ, ಜಿದ್ದು ಕಟ್ಟಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net