ಎಲ್ಲೆಡೆ ಕಾರಹುಣ್ಣಿಮೆ ಸಂಭ್ರಮ

2106Klb11
Published on

ಕಲಬುರಗಿ: ಮುಂಗಾರಿನ ಮೊದಲ ರೈತರ ಹಬ್ಬ ಕಾರಹುಣ್ಣಿಮೆಯನ್ನು ನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ಸಡಗರ ಸಂಭ್ರಮದಿAದ ಆಚರಿಸಲಾಯಿತು. ಗ್ರಾಮೀಣ ಭಾಗದಲ್ಲಿ ಎತ್ತುಗಳ ಮೆರವಣಿಗೆ ಮತ್ತು ಸಂಪ್ರದಾಯದAತೆ ಕರಿ ಹರಿಯುವುದು ಭರ್ಜರಿಯಾಗಿ ಜರುಗಿದವು.
ಹಳ್ಳಿಗಳಲ್ಲಿ ಕಾರಹುಣ್ಣಿಮೆ ಎಂದರೆ ರೈತರಿಗೆ ತಮ್ಮ ಸಂಗಾತಿಯAತಿರುವ ಎತ್ತು, ಹೋರಿ ಹಾಗೂ ರಾಸುಗಳನ್ನು ಮುಂಗಾರಿಗೆ ಸಜ್ಜುಗೊಳಿಸುವುದು. ಬೆಳಗ್ಗೆ ಎತ್ತುಗಳ ಮೈ ತೊಳೆದು ಬಣ್ಣ ಬಳಿದು, ಗೊಂಡೆ, ಗಂಟೆ, ಮಗಡಾ ಹಾಕಿ, ಕೊಂಬುಗಳಿಗೆ ರಿಬ್ಬನ್ ಕಟ್ಟಿ, ಕೊರಳಿಗೆ ಕರಿ ದಾರ ಬಳಸಿ ತಯಾರಿಸಿ ಶಂಖ ಇತರ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿದರು.
ಎತ್ತುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಗೊಟ್ಟಾ (ಮೊಟ್ಟೆ, ಇಂಗು ಇತರ ವಸ್ತುಗಳನ್ನು ಬಳಸಿ ಜ್ಯೂಸ್‌ನಂತಿರುವ ದ್ರಾವಣ) ಕುಡಿಸಿದರು. ಮಧ್ಯಾಹ್ನದ ಹೊತ್ತಿಗೆ ಶೃಂಗರಿಸಿದ ಎತ್ತುಗಳನ್ನು ಹಲಗೆ, ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ, ಸಾಂಪ್ರದಾಯಿಕ ಹಂತಿ ಪದಗಳನ್ನು ಹಾಡುತ್ತ ಮೆರವಣಿಗೆ ನಡೆಸಿದರು. ವಿವಿಧ ಗ್ರಾಮಗಳಲ್ಲಿ ಚಕ್ಕಡಿಗಳಿಗೆ ಎತ್ತುಗಳನ್ನು ಕಟ್ಟಿ ಓಡಿಸಿ, ಸಂಭ್ರಮಿಸಿದರು. ಕಿಚ್ಚು ಹಾಯಿಸಲಾಯಿತು.
ಹಳ್ಳಿಗಳಲ್ಲಿ ಊರ ಅಗಸಿ ಬಳಿ ಗ್ರಾಮದ ಪ್ರಮುಖರ ಮನೆಯ ಎತ್ತುಗಳು ಕರಿ ಹರಿದವು. ಜೋರಾಗಿ ಎತ್ತುಗಳನ್ನು ಓಡಿಸಿಕೊಂಡು ಬಂದು ಮೇಲಕ್ಕೆ ಕಟ್ಟಿರುವ ಬೇವಿನ ಇಲ್ಲವೆ ಬನ್ನಿ ತಪ್ಪಲಿನಿಂದ ಸಿದ್ಧಪಡಿಸಿದ್ದ ಕರಿಯನ್ನು ಮುಟ್ಟಬೇಕು. ಕರಿ ಹರಿದ ಎತ್ತು, ಹೋರಿಗಳಿಗೆ ಬಹುಮಾನ ನೀಡಿ, ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net