ಎಲ್ಲಾ ರಸ್ತೆಗಳು ಆರು ತಿಂಗಳಲ್ಲಿ ಅಭಿವೃದ್ಧಿ

All roads to be developed in six months
Published on

ಜಮಖಂಡಿ:ನಗರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಯ ಎಲ್ಲಾ ರಸ್ತೆಗಳನ್ನು ಮುಂದಿನ ಆರು ತಿಂಗಳೊಳಗಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.ನಗರದ ಮೋರೆ ಪ್ಲಾಟ್​ನಲ್ಲಿ ನಗರೋತ್ಥಾನ ಯೋಜನೆ ಹಂತ 4ರ ಅಡಿಯಲ್ಲಿ ಉದ್ಯಾನವನ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ನಾನು ಹೇಳುವುದಿಲ್ಲ. ನಾನು ಕೆಲಸಮಾಡಿ ಹೇಳಬೇಕೆಂದಿದ್ದೆ. ಆದರೆ ಈಗ ಹೇಳಬೇಕಾಗಿದೆ. ಸರ್ಕಾರ ನೀಡಿರುವ 25 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಗೆ, ಜಿ.ಪಂ., ನಗರ ಅಭಿವದ್ಧಿಗೆ ಬಳಸಿಕೊಳ್ಳಲಾಗುವುದು ಆರು ತಿಂಗಳಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಹನುಮಾನ ನಗರದಲ್ಲಿ ರಸ್ತೆ ಡಾಂಬರಿಕರಣ, ಹುಡ್ಕೋ ಕಾಲೋನಿಯಲ್ಲಿ ಅಂಗವಿಕಲ ಸ್ನೇಹಿ ಉದ್ಯಾನವನ ಅಭಿವೃದ್ಧಿಗೆ, ರುದ್ರಸ್ವಾಮಿ ಮಠದ ಹತ್ತಿರ ಸಮುದಾಯ ಭವನ ಮುಂದುಗಡೆ ಕಬ್ಬಿನ ಮೇಲ್ಛಾವಣಿ ನಿರ್ಮಿಸುವುದು, ದೇಸಾಯಿ ವೃತ್ತದಿಂದ ಹುನ್ನೂರ ವರೆಗೆ, ಚನ್ನಮ್ಮ ವೃತ್ತದಿಂದ ಎಸ್​ಆರ್​ ಅವರ ಕ್ಲಬ್​ವರೆಗೆ ಬೀದಿದೀಪ ಅಳವಡಿಸುವುದು, ಕನಕದಾಸ ಭವನ ಎದುರುಗಡೆ ಪ್ಲೇವರ್ಸ್​ ಅಳವಡಿಸುವುದು ಸೇರಿ ವಿವಿಧ ಯೋಜನೆಗಳನ್ನು ಒಟ್ಟು 2.6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯ ಈಶ್ವರ ವಾಳೆನ್ನವರ, ನಗರಸಭೆ ಆಯುಕ್ತ ಜ್ಯೋತಿ ಗಿರೀಶ, ಬಿಜೆಪಿ ನಗರ ಮಂಡಲ ಅಧ್ಯ ಅಜಯ ಕಡಪಟ್ಟಿ, ರಾಜು ಚಿಕನಾಳ, ಕುಶಾಲ ವಾಗ್ಮೋರೆ, ನಾನಾ ಮೋರೆ, ರಾಜು ಕಡಕೋಳ, ವಿನಾಯಕ ಪವಾರ, ಶ್ರೀಧರ ಕಂಬಿ ಇತರರಿದ್ದರು.

ಜಮಖಂಡಿ ನಗರದ ಮೋರೆ ಪ್ಲಾಟ್​ನಲ್ಲಿ ಉದ್ಯಾನವನ ಅಭಿವೃದ್ಧಿಗೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರು ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಅಧ್ಯ ಈಶ್ವರ ವಾಳೆನ್ನವರ, ಅಜಯ ಕಡಪಟ್ಟಿ, ನಾನಾ ಮೋರೆ, ಕುಶಾಲ ವಾಗ್ಮೋರೆ, ಶ್ರೀಧರ ಕಂಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net