ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷಿಸಬೇಡಿ

ldh pppa
ನಂದಿಬಟ್ಟಲು ಗ್ರಾಪಂನಿಂದ ಸಸಿಗಳನ್ನು ನೆಡಲಾಯಿತು. ಪಿಡಿಒ ಎನ್.ಎಸ್.ನಾಗರಾಜಪ್ಪ, ವಿನೋದ್ ಚೌಹಾಣ್, ರುಕ್ಮಿಣಿ ಇತರರಿದ್ದರು.
Published on

ಲಿಂಗದಹಳ್ಳಿ: ಮನೆಗೊಂದು ಮರ, ಊರಿಗೊಂದು ವನ ಎಂಬಂತೆ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಬೆಳೆಸಿದರೆ ಶುದ್ಧ ಗಾಳಿ, ಕಾಲ ಕಾಲಕ್ಕೆ ಮಳೆ ಬೆಳೆಗಳಾಗಲಿದೆ ಎಂದು ನಂದಿಬಟ್ಟಲು ಪಿಡಿಒ ಎನ್.ಎಸ್.ನಾಗರಾಜಪ್ಪ ಹೇಳಿದರು.

ನಂದಿಬಟ್ಟಲು ಗ್ರಾಪಂ ಮತ್ತು ಜೀವನ ಜ್ಯೊತಿ ಒಕ್ಕೂಟಗಳ ಆಶ್ರಯದಲ್ಲಿ ಅನೇಕ ಗ್ರಾಮಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಮಾತನಾಡಿ, ಪ್ರಕೃತಿ ಸಮೃದ್ಧವಾಗಿದ್ದರಷ್ಟೇ ಸಕಲ ಜೀವಿಗಳ ಜೀವನ ಸಮೃದ್ಧವಾಗಿರಲಿದೆ. ಎಲ್ಲ ಕೆಲಸಗಳಿಗೂ ಸರ್ಕಾರದತ್ತ ಬೊಟ್ಟು ಮಾಡದೆ ಎಲ್ಲರೂ ಸಾಧ್ಯವಾದಷ್ಟು ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದರು.

ಗ್ರಾಮ ಲೆಕ್ಕಾಧಿಕಾರಿ ವಿನೋದ್ ಚೌಹಾಣ್ ಮಾತನಾಡಿ, ಪ್ರಕೃತಿಯನ್ನು ಮಾತೃ ಸ್ವರೂಪಿಯಾಗಿ ಕಾಣುವ ರೈತ ಬಾಂಧವರು ಜಮೀನುಗಳ ಬದುಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷ ಆರ್.ಮುರುಗ, ಜೀವನ ಜ್ಯೋತಿ ಒಕ್ಕೂಟದ ಸಂಚಾಲಕಿ ರುಕ್ಮಿಣಿ, ಗ್ರಾಪಂ ಸಿಬ್ಬಂದಿ ಆರ್.ರಾಜೇಶ್, ಎನ್.ರವಿ ಇತರರಿದ್ದರು.

ಗಂಗೂರು ಶಾಲೆ: ಪ್ರತಿ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಿದರೆ ಹಸಿರು ವಾತಾವರಣ ನಿರ್ಮಾಣವಾಗಲಿದೆ ಎಂದು ಸಿಎಂಎಸ್‌ಎಸ್‌ಎಸ್ ಸಂಚಾಲಕಿ ರುಕ್ಮಿಣಿ ಹೇಳಿದರು. ಗಂಗೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಜಾತಿಯ ಸಸಿಗಳನ್ನು ನೆಡೆಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ತಿಳಿಸಿಕೊಡಬೇಕು ಎಂದರು. ಗಂಗೂರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು, ಗ್ರಾಮಸ್ಥರು ವಿವಿಧ ಜಾತಿಯ ಸಸಿಗಳನ್ನು ನೆಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net