ಎಲ್ಲವನ್ನೂ ಬಿಚ್ಚಿಡುವುದೇ ನಿಜವಾದ ಆತ್ಮಕಥನ

4
Published on

ಬಚ್ಚಿಡುವುದು ಆತ್ಮಕಥನವಲ್ಲ. ಎಲ್ಲವನ್ನೂ ಬಿಚ್ಚಿಡುವುದೇ ನಿಜವಾದ ಆತ್ಮಕಥನ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಸೋಮಶೇಖರಗೌಡ-75 ಮತ್ತು ಅವರ ‘ದೇವರ ದಿನಗಳು’ ಆತ್ಮಕಥನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಹಳಷ್ಟು ಆತ್ಮಚರಿತ್ರೆ ಬಂದಿವೆ. ಅದರಲ್ಲಿ ಕೆಲ ಸಂಗತಿಗಳನ್ನು ಕೈಬಿಟ್ಟಿರುತ್ತಾರೆ. ಹೀಗಾದರೆ ಅದು ಆತ್ಮಕಥನ ಎನಿಸಿಕೊಳ್ಳಲ್ಲ. ಇರುವುದನ್ನು ಇರುವ ಹಾಗೆಯೇ ಅಕ್ಷರ ರೂಪ ಕೊಟ್ಟು ಪ್ರಕಟಿಸುವುದು ನಿಜವಾದ ಆತ್ಮಕಥೆ. ಪ್ರೊ.ಸೋಮಶೇಖರಗೌಡ ಅವರ ಈ ಆತ್ಮಕಥನವೂ ಅದೇ ರೀತಿಯಲ್ಲಿ ಇದೆ ಎಂದು ಹೇಳಿದರು.

ಶ್ರೀರಂಗಪಟ್ಟಣದ ಬೇಬಿಮಠ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಸಮಯ ಮಾತ್ರ ನಮ್ಮದು. ಉಳಿದ ಯಾವುದೂ ನಮ್ಮದಲ್ಲ. ಆಯಾ ಸಮಯದಲ್ಲಿ ಏನು ಮಾಡುತ್ತೇವೆ ಎಂಬುದು ಮುಖ್ಯ. ಅದು ಕಳೆದು ಹೋದ ಮೇಲೆ ಪರಿತಪಿಸಿದರೆ ಏನೂ ಪ್ರಯೋಜನವಿಲ್ಲ. ಕಳೆದ ಹೋದ ಸಮಯವನ್ನು ಕೋಟಿ ರೂ.ಕೊಟ್ಟರೂ ವಾಪಸ್ ಬರಲ್ಲ. ಆದ್ದರಿಂದ ದೇವರು ಕೊಟ್ಟಿರುವ ಸಮಯವನ್ನು ವ್ಯರ್ಥ ಮಾಡಬಾರದು. ಸಮಯವನ್ನು ಸದ್ಬಳಕೆ ಮಾಡಿಕೊಂಡಿರುವುದು ಈ ಆತ್ಮಕಥನದಲ್ಲಿ ಗೋಚರವಾಗುತ್ತದೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್, ಲೇಖಕ ಪ್ರೊ.ಸೋಮಶೇಖರಗೌಡ, ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net