ಎಲ್ಲರೂ ಸೈನಿಕರಂತೆ ಕಾರ್ಯನಿರ್ವಹಿಸಿ

klb5
ಯಡ್ರಾಮಿಯ ಕದಂಬ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಸರಣಿ ಉಪನ್ಯಾಸ ಮಾಲಿಕೆಗೆ ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಚಾಲನೆ ನೀಡಿದರು. ರೇಣುಕಾಚಾರ್ಯ ಸ್ಥಾವರಮಠ, ಧೂಳಪ್ಪ ದ್ಯಾಮನಕರ್, ದೇವೇಂದ್ರ ಗುಡೂರ, ಶಿವಯೋಗೆಪ್ಪ ಬಿರಾದಾರ, ಮಹಾನಂದ ಹಿರೇಮಠ ಇತರರಿದ್ದರು.
Published on

ಯಡ್ರಾಮಿ: ಮಹನಿಯರ ಹೋರಾಟ ಶ್ರಮದ ಫಲದಿಂದ ಸ್ವಾತಂತ್ರÈ ದೊರಕಿದ್ದು, ಅದನ್ನು ಉಳಿಸಲು ದೇಶದ ಪ್ರತಿಯೊಬ್ಬರೂ ಸೈನಿಕರಂತೆ ಕಾರ್ಯ ನಿರ್ವಹಿಸಬೇಕು ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.

ಪಟ್ಟಣದ ಕದಂಬ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಿಸರ್ಗ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಬೆಳ್ಳಿ ಮಹೋತ್ಸವ, ಸ್ವಾತಂತ್ರೊÈÃತ್ಸವದ ನಿಮಿತ್ತ ಹಮ್ಮಿಕೊಂಡ ಸರಣಿ ಉಪನ್ಯಾಸ ಮಾಲಿಕೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ದೇಶದ ಸ್ವಾತಂತ್ರÈಕ್ಕಾಗಿ ಹಲವು ಹೋರಾಟಗಾರರು ಪ್ರಾಣ ಬಲಿದಾನ ಮಾಡಿದ್ದಾರೆ. ವಿದ್ಯಾರ್ಥಿ ದಿಸೆಯಿಂದಲೇ ಅವರ ಬಗ್ಗೆ ಅಧ್ಯಯನ, ಸ್ಮರಣೆ ಮಾಡಬೇಕು ಎಂದರು.

ಮಾಜಿ ಸೈನಿಕ ರೇಣುಕಾಚಾರ್ಯ ಸ್ಥಾವರಮಠ ಮಾತನಾಡಿ, ಜಾತಿ, ಧರ್ಮ, ಭಾಷೆ, ಪ್ರದೇಶ ಎಲ್ಲವನ್ನು ಮೀರಿ ನಾವೆಲ್ಲರೂ ಒಂದೇ ಎಂಬ ಭಾವ ಮೈಗೂಡಿಸಿಕೊಳ್ಳಬೇಕು. ರಾಜಕಾರಣಿಗಳು, ಅಧಿಕಾರಿಗಳು ಅಧಿಕಾರದಾಹದಿಂದ ಹೊರಬಂದು ದೇಶಕ್ಕಾಗಿ ದುಡಿಯಬೇಕು ಎಂದರು.
ನಿಸರ್ಗ ಸಂಸ್ಥೆ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ್, ಪ್ರಾಚಾರ್ಯ ದೇವೇಂದ್ರ ಗುಡೂರ, ಪ್ರಮುಖರಾದ ಎಚ್.ಬಿ.ಪಾಟೀಲ್, ಶಿವಯೋಗೆಪ್ಪ ಬಿರಾದಾರ, ಉತ್ತರದೇವಿ, ಮಹಾನಂದ ಹಿರೇಮಠ, ಅಬ್ದುಲ್ವಾಬ್, ಆರ್.ಬಿ.ಮಯೂರ, ಕಾಶೀನಾಥ ನವಲಕರ್, ಭಾಗ್ಯಶ್ರೀ ಗೌಡಗೇರಿ, ಸುಧಾಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net