ಎಲ್ಲರೂ ಸಮಾನತೆಯಿಂದ ಜೀವಿಸುವಂತಾಗಲಿ

26Rajesh6
Published on

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನತೆಯಿಂದ ಜೀವಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಡಾ.ಶೇಖರ್ ಹೇಳಿದರು.

ಗಾನಗಂಧರ್ವ ಡಾ.ಎಸ್.ಪಿ ಬಾಲಸುಬ್ರಮಣ್ಯಂ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಪ್ರಕೃತಿ ಶೈಕ್ಷಣಿಕ ಸಾಂಸ್ಕೃತಿಕ ಕಲಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಭಾನುವಾರ ನಗರದ ಕುಲುಮೆ ರಸ್ತೆಯಲ್ಲಿರುವ ಕರಾಮುವಿವಿ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸೇವೆ ಅಪಾರವಾದದ್ದು. ಅವರು ರಚನೆ ಮಾಡಿದ ಸಂವಿಧಾನದಿಂದ ಎಲ್ಲ ಸಮುದಾಯದಗಳಿಗೂ ಅನುಕೂಲವಾಗಿದೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಕ್ರಾಂತಿ ಸೇನೆ(ಮಾಧ್ಯಮ ವಿಭಾಗ) ರಾಜ್ಯಾಧ್ಯಕ್ಷ ಇರಸವಾಡಿ ಸಿದ್ದಪ್ಪಾಜಿ ಮಾತನಾಡಿ, ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಪ್ರಕೃತಿಯನ್ನು ಪೋಷಿಸಬೇಕು ಎಂದು ಕರೆ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ. ಶಿವಣ್ಣ, ಅಧ್ಯಕ್ಷ ಅಂಬರೀಶ್, ಗಾಯಕ ಸುಗಂಧರಾಜ್, ಫ್ರೆಂಡ್ಸ್ ಮ್ಯೂಸಿಕ್ ಮಾಲೀಕ ದೊರೆರಾಜು, ನಾಗಮಹದೇವ್, ನಿವೃತ್ತ ಮುಖ್ಯ ಶಿಕ್ಷಕ ರಂಗಸ್ವಾಮಿ, ಮುಖಂಡ ಜಯಶಂಕರ್, ಮಂಜುನಾಥ್ ವಿಶ್ವಕರ್ಮ, ಸಿ.ಮಾದೇಶ್, ಮಹಾದೇವಯ್ಯ, ಆಶಾಲತಾ, ಕಾರ್ತಿಕ, ಕಾವ್ಯಾ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net