ಎಲ್ಲರೂ ಸನ್ಮಾರ್ಗದಲ್ಲಿ ನಡೆಯಿರಿ

12 KURGODU 02
Published on

ಕುರುಗೋಡು: ದೇಹದ ಒಳಗಿನ ಕತ್ತಲೆ ಹೋಗಲಾಡಿಸಬೇಕಾದರೆ ಜ್ಞಾನದ ದೀಪ ಹಚ್ಚಬೇಕು ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರುಗುರು ಗುರು ಮಹಾಂತಿನ ಮಠದ ಶ್ರೀವಾಮದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಸಮೀಪದ ಬಾದನಹಟ್ಟಿ ಗ್ರಾಮದ ಉಡುಸಲಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಪುರಾಣದ ಸಾನ್ನಿಧ್ಯವಹಿಸಿ ಮಾತನಾಡಿದರು. ದೇವಿ ಪುರಾಣದಲ್ಲಿ ಬರುವ ಎಲ್ಲ ಸನ್ನಿವೇಶಗಳು ಮನುಷ್ಯನ ದೇಹಕ್ಕೆ ಸಂಬಂಧಿಸಿದವುಗಳಾಗಿವೆ.

ಶುಂಭ, ನಿಶುಂಭ ರೆಂಬ ಮಹಾರಾಕ್ಷಸರು ಮನುಷ್ಯನ ದೇಹದಲ್ಲಿಯೇ ನೆಲೆಸಿದ್ದಾರೆ. ಅವರು ಯಾರೆಂದರೆ ನಾನು ಮತ್ತು ನನ್ನದು ಎನ್ನುವುದು. ಇದನ್ನು ಹೋಗಲಾಡಿಸಿದರೆ ಮಾತ್ರ ಜೀವನ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net