

ಚಿಂಚೋಳಿ: ನಮ್ಮ ಶ್ರೇಷ್ಠ ಸಂವಿಧಾನವೂ ಬುದ್ಧ, ಬಸವ, ಡಾ.ಅಂಬೇಡ್ಕರ್ ಅವರ ಸಮ ಸಮಾಜದ ಕನಸು ಸಾಕಾರಗೊಳಿಸಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಪಾಟೀಲ್ ಹೇಳಿದರು.
ಡಿ.ದೇವರಾಜ ಅರಸು ಬಾಲಕರ ವಸತಿ ನಿಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ನಡೆ ಸಂವಿಧಾನದ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆ ದುಶ್ಚಟಗಳಿಂದ ದೂರವಿರಬೇಕು. ಗುಣಮಟ್ಟದ ಶಿಕ್ಷಣ ಪಡೆದ ಹೆತ್ತವರ ಕನಸು ಸಾಕಾರಗೊಳಿಸಬೇಕು. ಪ್ರತಿಯೊಬ್ಬರೂ ಸಂವಿಧಾನವನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಮಾರುತಿ ಗಂಜಗೇರಿ, ರಾಜಶೇಖರ ಮುಸ್ತಾರಿ, ಯಲ್ಲಾಲಿಂಗ ದಂಡಿನ್, ಸುರೇಶ ದೇಶಪಾಂಡೆ, ಪ್ರವೀಣ ಮೇತ್ರಿ, ಶರಣು ತೇಗಲತಿಪ್ಪಿ, ವಾಸೀಂ ಅಕ್ರಂ, ಅಶೋಕ ಬಾಬು, ಗುರುಪ್ರಸಾದ ಪಾಟೀಲ್ ಇತರರಿದ್ದರು.