ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಿಸಬೇಕು

10
Published on

ಗೋಕಾಕ: ನಾವೆಲ್ಲರೂ ಒಂದೇ ಭಾವನೆಯಿಂದ ಈದ್​ ಮಿಲಾದ್​ ಮತ್ತು ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ ಎಂದು ತಹಸೀಲ್ದಾರ್​ ಡಾ.ಮೋಹನ ಭಸ್ಮೆ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ತಾಲೂಕಾಡಳಿತ, ಪೊಲೀಸ್​ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ಶಾಂತಿಪಾಲನಾ ಸಭೆ ಅಧ್ಯತೆ ವಹಿಸಿ ಮಾತನಾಡಿದರು. ಗೌರಿ&ಗಣೇಶ ಚತುರ್ಥಿ ಪರಿಸರ ಸ್ನೇಹಿಯಾಗಿ ಆಚರಿಸಬೇಕು. ಹಸಿರು ಪಟಾಕಿ ಬಳಸಬೇಕು. ನೆಸರ್ಗಿಕ ಬಣ್ಣ ಬಳಸಿ ಗಣೇಶ ಹಬ್ಬ ಆಚರಿಸಬೇಕು. ಅಹಿತಕರ ಟನೆ ಆಗದಂತೆ ಎಲ್ಲರೂ ಶ್ರಮಿಸಬೇಕು ಎಂದರು.

ಪಿಎಸ್​ಐ ಕೆ.ವಾಲಿಕರ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಅಗ್ನಿ ಅವಡ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಎಂದರು. ಪೌರಾಯುಕ್ತ ರಮೇಶ ಜಾಧವ, ಎಂ.ಎಚ್​. ಗಜಾಕೋಶ, ಎಸ್​.ಪಿ.ವರಾಳೆ, ವಿನೋದ ಪಾಟೀಲ, ಅಗ್ನಿ ಶಾಮಕ ಠಾಣಾಧಿಕಾರಿ ಎಸ್​.ಎನ್​ ಮೆಳವಂಕಿ, ಹೆಚ್ಚುವರಿ ಪಿಎಸ್​ಐ ರವಿ ವಾಲಿಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net