

ಇಟಗಿ: ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸತಿ ಬೆಳೆಯಲು ಆಧ್ಯಾತ್ಮಿಕ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಅವರೊಳ್ಳಿ&ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಹೇಳಿದರು.
ಸಮೀಪದ ಮೂಕಬಸವ ನಗರದಲ್ಲಿ ಮಂಗಳವಾರ ಶ್ರಾವಣ ಮಾಸದ ಪ್ರವಚನದ ಸಮಾರೋಪ ಸಮಾರಂಭ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು. ಶ್ರಾವಣ ಮಾಸದಲ್ಲಿ ನಿರಂತರವಾಗಿ ಮಹಾತ್ಮರ ಸಂದೇಶ ಅರಿತು ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ರೂಪಿಸಿಕೊಳ್ಳಬೇಕು ಎಂದರು.
ಹಿರೇಮುನವಳ್ಳಿಯ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಯುವಜನರು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾನೀಯ ಎಂದರು. ಬಸವನಬಾಗೇವಾಡಿಯ ವಿರಕ್ತಮಠದ ಪ್ರಭು ಶಿವಲಿಂಗ ಶಿವಯೋಗಿಶ್ವರರ ಕುರಿತು ಪ್ರವಚನ ನೀಡಿದ ಮಂಜು ಅಂಕಲಗಿ ಅವರನ್ನು ಸತ್ಕರಿಸಲಾಯಿತು. ಮಹಾದೇವಾನಂದ ಸ್ವಾಮಿಜಿ, ಮಲ್ಲಪ್ಪ ತೇಗೂರ, ಎಸ್.ಐ.ಗಣಾಚಾರಿ, ಶಂಕರಗೌಡ ಪಾಟೀಲ, ರುದ್ರಗೌಡ ಪಾಟೀಲ, ಸಿದ್ದು ಪಾಟೀಲ, ನವೀನ ಹಿರೇಮಠ, ವಾಸುದೇವ ಬಾಗೇವಾಡಿ, ಸಂಗಮೇಶ ಹಿರೇಮಠ, ಯಲ್ಲಪ್ಪ ಕಾರ್ಕದ, ಈರಪ್ಪ ನೇಗಿನಹಾಳ, ಮಿನಾಜ ತಿಗಡಿ, ಅರ್ಜುನ ಮಾತಾರಿ ಇತರರು ಇದ್ದರು. ವಿವೇಕ ಕುರಗುಂದ ನಿರೂಪಿಸಿದರು.