ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಿರಿ

02
Published on

ಕೆಂಭಾವಿ : ಗಣೇಶೋತ್ಸವ ಮೂಲಕ ಧರ್ಮಸಭೆ ಆಯೋಜಿಸಿ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುತ್ತಿರುವುದಕ್ಕೆ ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ನಗನೂರ ಗ್ರಾಮದಲ್ಲಿ ಅಗಸಿ ಗಜಾನನ ಯುವಕ ಮಂಡಳಿ ಗಣೇಶ ಹಬ್ಬ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಧರ್ಮಸಭೆ ಉದ್ಘಾಟಿಸಿದ ಅವರು, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯಬೇಕು. ಪರೋಪಕಾರ ಮನೋಭಾವ ಮೈಗೂಡಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಭಾರತದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿ ಒಂದು. ಈ ಪರ್ವದಲ್ಲಿ ಮನೆ-ಮನೆ ಮತ್ತು ಗ್ರಾಮೀಣ ಭಾಗದಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಶ್ರೀ ಸೂಗೂರೇಶ್ವರ ಶಿವಾಚಾರ್ಯ, ಶ್ರೀ ಚನ್ನಬಸವ ಶಿವಾಚಾರ್ಯ, ಶಹಾಪುರದ ಶ್ರೀ ಸೂಗೂರೇಶ್ವರ ಶಿವಾಚಾರ್ಯ, ಶ್ರೀ ರುದ್ರಮುನಿ ಶಿವಾಚಾರ್ಯ, ಶ್ರೀ ರಾಜೇಂದ್ರ ಒಡೆಯರ್ ಸ್ವಾಮೀಜಿ, ಶ್ರೀ ಬಸಯ್ಯ ಸ್ವಾಮಿ ದಂಡಸೊಲ್ಲಾಪುರ, ಶ್ರೀ ಸಿದ್ದು ಶರಣರು, ಶ್ರೀ ಧ್ರುವರಾಜ ಜೋಶಿ, ಶ್ರೀ ಖಂಡಪ್ಪ ತಾತ, ಶ್ರೀ ಸಿದ್ದಪ್ಪ ತಾತ, ಪ್ರಮುಖರಾದ ಸಂಜೀವರೆಡ್ಡಿ ದರ್ಶನಾಪುರ, ಬಾಬುಗೌಡ ಪಾಟೀಲ್ ಅಗತೀರ್ಥ, ಶಿವರಾಜ ಬುದೂರ, ರಾಜಶೇಖರ ಗೂಗಲ್, ಚನ್ನಬಸಪ್ಪ ದೇಸಾಯಿ, ರಾಹುಸಾಬ ದೇಸಾಯಿ, ಚನ್ನಾರಡ್ಡಿ ದೇಸಾಯಿ, ರಾಮಣ್ಣ ದೇಶಪಾಂಡೆ, ಸಂಗಣ್ಣ ವಣಿಕ್ಯಾಳ, ಸಂಗನಗೌಡ ಮಾಲಿಪಾಟೀಲ್, ಪ್ರಕಾಶ ಪಾಟೀಲ್, ವಿನಯರೆಡ್ಡಿ ಗೂಗಲ್, ಮಂಡಳಿ ಅಧ್ಯಕ್ಷ ಶಂಕರಗೌಡ ಪೊಲೀಸ್ ಪಾಟೀಲ್ ಇತರರಿದ್ದರು.

ಸಿದ್ದನಗೌಡ ಗೂಗಲ್ ಸ್ವಾಗತಿಸಿದರು. ನಾಗಭೂಷಣ ಪತ್ತಾರ ವಂದಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಣೆ ಮಾಡಿದರು. ಕರ‍್ಯಕ್ರಮಕ್ಕೂ ಮೊದಲು ಶರಣಬಸವೇಶ್ವರ ಪಾದಕಟ್ಟೆಯಲ್ಲಿ ಸಿಂಗರಿಸಿದ ಸಾರೋಟಿನಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರನ್ನು ಕುಂಭ ಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net