ಎಲ್ಲರೂ ಕೈ ಜೋಡಿಸಬೇಕಿದೆ

CTD VHP
Published on

ಚಿತ್ರದುರ್ಗ: ಪುಣ್ಯಭೂಮಿ ಭಾರತ ದಾರ್ಶನಿಕರ, ಸಂತರ, ಶರಣರ ನಾಡಾಗಿದೆ ಎಂದು ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾ ಮೀಜಿ ಹೇಳಿದರು.
ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನದ ಅಂಗವಾಗಿ ನಗರದ ಶ್ರೀ ಕಬೀರಾನಂದಾಶ್ರಮದ ಆವರಣದಲ್ಲಿ ಈಚೆಗೆ ಏ ರ್ಪಡಿಸಿದ್ದ ‘ಷಷ್ಠಿಪೂರ್ತಿ’ ಸಮಾರೋಪದ ಧಾರ್ಮಿಕ ಸಭೆ ಹಾಗೂ ಶ್ರೀ ಕೃಷ್ಣ ವೇಷಭೂಷಣ ಕಾರ‌್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಂಸ್ಕಾರ ಹೆಚ್ಚಿದೆ. ವಿಶ್ವ ಹಿಂದು ಪರಿಷತ್‌ನ ಹಿಂದುತ್ವದ ರಕ್ಷಣೆಗೆ ಎಲ್ಲರೂ ಕೈ ಜೋಡಿಸ ಬೇಕಿದೆ ಎಂದರು.
ಬಜರಂಗದಳದ ಪ್ರಾಂತ ಸಂಯೋಜಕ ಪ್ರಭಂಜನ್ ಮಾತನಾಡಿ, ಅಸಮಾನತೆ ಭಾವನೆ ತೊಲಗಿಸಿ ಹಿಂದುಗಳು ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಬೇಕಿದೆ. ವಿಶ್ವದೆಲ್ಲೆಡೆ ಸನಾತನ ಧರ್ಮದ ಹಿರಿಮೆ ಪಸರಿಸಿ, ಸಂರಕ್ಷಣೆಯಲ್ಲಿ ಸಂಘಟನೆ 60 ವರ್ಷಗಳಿಂದ ನಿರಂ ತರವಾಗಿ ಸೇವೆ ಸಲ್ಲಿಸುತ್ತಿದೆ. ಕೃಷ್ಣನ ವೇಷ ಹಾಕಿಸುವ ತಾಯಂದಿರು ಮಕ್ಕಳಿಗೆ ಧರ್ಮದ ಮಹತ್ವವನ್ನು ಹೇಳಿಕೊಡಬೇಕಿದೆ. ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.
ಟಾರ್ಗೆಟ್ ಯುವ ವೇದಿಕೆ ಅಧ್ಯಕ್ಷ ಸಿದ್ದರಾಜ್ ಜೋಗಿ ಮಾತನಾಡಿದರು. ಶ್ರೀ ಶಾರದ ಬ್ರಾಸ್ ಬ್ಯಾಂಡ್ ಸಂಗೀತ ಕಲಾವಿದ ಎಸ್.ವಿ.ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯೋಗಾಸನ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಎಲ್.ಎಸ್. ಚಿನ್ಮಯಾನಂದ, ಶಿಲ್ಪಿ ಕೀರ್ತಿ ನಂಜುಂಡಸ್ವಾಮಿ, ವಿಎಚ್‌ಪಿ ನಗರ ಅಧ್ಯಕ್ಷ ಇ.ಅಶೋಕ್‌ಕುಮಾರ್ ಇದ್ದರು. ಗಂಗಾಧರ್ ಪ್ರಾರ್ಥಿಸಿ, ಚನ್ನಕೇಶವ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net