ಎಲ್ಲರೂ ಕಂಪ್ಯೂಟರ್​ ಜ್ಞಾನ ಹೊಂದುವುದು ಮುಖ್ಯ

4
Published on

ಬೈಲಹೊಂಗಲ: ಕಂಪ್ಯೂಟರ್​ ಜ್ಞಾನವಿಲ್ಲದವರನ್ನು ಅನರಸ್ಥರಿಗೆ ಹೋಲಿಸಲಾಗುತ್ತಿದೆ. ಅಷ್ಟರಮಟ್ಟಿಗೆ ಕಂಪ್ಯೂಟರ್​ ಜೀವನ ಅವಿಭಾಜ್ಯ ಅಂಗವಾಗಿ ಪರಿಗಣಿಸಲ್ಪಟ್ಟಿದೆ ಎಂದು ಇಂಚಲ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ಸಮೀಪದ ಇಂಚಲ ಗ್ರಾಮದಲ್ಲಿ ಶಿವಾನಂದ ಭಾರತಿ ಶಿಣ ಸಂಸ್ಥೆ ಹಾಗೂ ಇನೋವಿ ಮೊಬೈಲಿಟಿ ಸೊಲ್ಯೂಷನ್​ ಪ್ರೆ.ಲಿ. ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಕಂಪ್ಯೂಟರ್​ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್​ ಜ್ಞಾನ ಅವಶ್ಯ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮಿಜಿ ಮಾತನಾಡಿ, ವಿದ್ಯಾರ್ಥಿಗಳು ಗಣಕಯಂತ್ರದ ನಿರ್ವಹಣೆ ವೇಳೆ ಎಚ್ಚರ ವಹಿಸಬೇಕು ಎಂದರು.

ಇನೋವಿ ಕಂಪನಿ ಅಮಿತ್​ ಇಂಗಳೆ, ವಾಸು, ಚೇತನ ಶೆಟ್ಟಿ ಅವರು 24 ಲ ರೂ.ಮೌಲ್ಯದ ಕಂಪ್ಯೂಟರ್​ ನೀಡಿದ್ದರಿಂದ ಶ್ರೀಗಳು ಸತ್ಕರಿಸಿದರು. ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಮಲ್ಲೇಶ ಶರಣರು, ಮಾಜಿ ಚೇರ್ಮನ್​ ಎಸ್​.ಎಂ.ರಾಹುತನವರ, ಎಸ್​.ಎನ್​.ಕೊಳ್ಳಿ, ಜಿ.ವಿನಯಮೋಹನ, ವಿ.ಎಸ್​.ಬನ್ನೆಪ್ಪಗೂಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net