

ನಂದೇಶ್ವರ: ಮಾನವರಾಗಿ ಜನಸಿದ ಮೇಲೆ ಪ್ರತಿಯೊಬ್ಬರೂ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದು ಹಳಿಂಗಳಿಯ ಅಭಿನವ ಶರಣಬಸವ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಮಂಗಳವಾರ ಶ್ರೀ ರೇಣುಕಾದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ರೀ ರೇಣುಕಾದೇವಿ ದೇವಸ್ಥಾನ ನಿರ್ಮಿಸಲು ದೇಣಿಗೆ ನೀಡಿದ ಚಂದ್ರವ್ವ ದೇವಣ್ಣವರ ಹಾಗೂ ಅವರ ಮಕ್ಕಳಾದ ಉದ್ಯಮಿ ಪಾಯಪ್ಪ ದೇವಣ್ಣವರ, ಬಸವರಾಜ ದೇವಣ್ಣವರ ಅವರನ್ನು ಸತ್ಕರಿಸಲಾಯಿತು.
ಅಥಣಿ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ದೇವಣ್ಣವರ, ಬುಜಬಲಿ ಪರಟಿ, ಬಸಪ್ಪ ಚಂಡಕಿ, ಮಾರುತಿ ಪಾಟೀಲ, ಹಣಮಂತ ಹಳಿಂಗಳಿ, ಕೇತನ ದೇವಣ್ಣವರ, ಗುರುಲಿಂಗ ತೇಲಿ, ಮಹಾದೇವ ನಾಯಕ, ಅದೃಶ್ಯ ಪಾಟೀಲ, ಲಕ್ಷ್ಮಣ ಮಗದುಮ್ಮ, ಅಪ್ಪಾಸಾಬ ಮುಧೋಳ, ಮಹಾವೀರ ಪರಟಿ ಇತರರಿದ್ದರು. ಎಸ್.ಬಿ. ಲಾಲಸಿಂಗಿ ನಿರೂಪಿಸಿ, ವಂದಿಸಿದರು.