ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕೋಣ

19 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಿಗೆ ಛತ್ರಪತಿ ಶಿವಾಜಿ ಮಹಾರಾಜರ ಗುಣಗಳನ್ನು ಕಲಿಸಿ ಹಿಂದುತ್ವದ ರಕ್ಷಣೆ ಮಾಡುವ ಮೂಲಕ ಶಿವಾಜಿ ವ್ಯಕ್ತಿತ್ವವನ್ನು ಎಲ್ಲೆಡೆ ಸಾರೋಣ ಎಂದು ಪಾಲಿಕೆ ಸದಸ್ಯ ಶಂಕರ ಶೇಳಕೆ ಹೇಳಿದರು.
ನಗರದ ಭಾರತ ಪ್ರೌಢ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮರಾಠ ವಿದ್ಯಾ ಪ್ರಸಾರಕ ಮಂಡಳ ವತಿಯಿಂದ ಭಾನುವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಕ್ಸಲೆಂಟ್ ಕೋಚಿಂಗ್ ಸಂಸ್ಥೆ ನಿರ್ದೇಶಕ ಸತೀಶ ಜಾಧವ ಮಾತನಾಡಿ, ಶಿವಾಜಿ ಹಿಂದುತ್ವದ ಬಿಂದು. ಮರಾಠ ಸಾಮ್ರಾಜ್ಯವನ್ನು ತನ್ನ ಚಿಕ್ಕ ವಯಸ್ಸಿನಲ್ಲೇ ಕಟ್ಟಿ ಬೆಳೆಸಿದ್ದಾನೆ. ಜನಸಾಮಾನ್ಯರು ಶಿವಾಜಿಯನ್ನು ದೇವರಾಗಿ ಕಾಣುತ್ತಾರೆ. ಅವರು ಸಾಮ್ರಾಜ್ಯ ವಿಸ್ತರಿಸಿದಂತೆ ನಾವು ಪ್ರೀತಿಯನ್ನು ಎಲ್ಲರಿಗೆ ವಿಸ್ತರಿಸೋಣ. ರಾಜರಲ್ಲೇ ಶ್ರೇಷ್ಠ ರಾಜ ಶಿವಾಜಿ ಎಂದರು.
ಮರಾಠ ವಿದ್ಯಾ ಪ್ರಸಾರಕ ಮಂಡಳ ಅಧ್ಯಕ್ಷ ಮನೋಹರ ಮೋರೆ, ಕಾರ್ಯಾಧ್ಯಕ್ಷ ಶುಭಾಷ ಶಿಂಧೆ, ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ, ಗೌರವ ಕಾರ್ಯದರ್ಶಿ ರಾಜು ಬಿರ್ಜೆನವರ, ನಿರ್ದೇಶಕರಾದ ರಾಜು ಕಾಳೆ, ಸುನೀಲ ಮೋರೆ, ಪಾಲಿಕೆ ಸದಸ್ಯ ಮಯೂರ ಮೋರೆ, ಇತರರು ಇದ್ದರು.
ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಎಂ.ಎಸ್. ಗಾಣಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net