ಎಲ್ಲರಿಗೂ ಸಂಸ್ಕೃತ ಕಲಿಸಬೇಕು

14NDR3
Published on

ನಂದೇಶ್ವರ: ಪ್ರತಿಯೊಬ್ಬರೂ ಸಂಸ್ಕೃತ ಕಲಿತು ಬೇರೆಯವರು ಕಲಿಯುವಂತೆ ಪ್ರೇರಣೆ ನೀಡಬೇಕು ಎಂದು ಸದ್ಗುರು ಡಾ. ದುಂಡೇಶ್ವರ ಸ್ವಾಮೀಜಿ ಹೇಳಿದರು.

ಗ್ರಾಮದ ಸದ್ಗುರು ಸಿದ್ದಲಿಂಗೇಶ್ವರ ಸ್ವಾಮೀಜಿ ಮಧುರಖಂಡಿ ಕಮರಿಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೫೩ನೆಯ ಉಚಿತ ಸಂಸ್ಕೃತ ಸಂಭಾಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಕೃತ ಕಲಿಯಲು ಮೊದಲು ಕಾಶಿಗೆ ತೆರಳಬೇಕಾಗಿತ್ತು. ಸದ್ಗುರು ಸಿದ್ದಲಿಂಗೇಶ್ವರ ಸ್ವಾಮಿಗಳ ಆಶೀರ್ವಾದದಿಂದ ನಂದೇಶ್ವರ ಗ್ರಾಮವೇ ಸಂಸ್ಕೃತಮಯವಾಗಿರುವುದು ತುಂಬ ಸಂತೋಷ ತಂದಿದೆ ಎಂದರು.

ಮಕ್ಕಳಿಂದ ಸಂಸ್ಕೃತ ಭಾಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವೇದ ಸಂಗೀತ ಪಾಠ ಶಾಲೆಗಳ ಅಧ್ಯಕ್ಷ ಪ್ರಭು ಪೂಜಾರಿ, ಹಣಮಂತ ಬಡಿಗೇರ, ಜಡೆಪ್ಪ ಕುಂಬಾರ, ಸಂಸ್ಕೃತ ಸಂಪನ್ಮೂಲ ವ್ಯಕ್ತಿ ಆರತಿ ಖೋತ, ಬಸವರಾಜ ಲಕ್ಷ್ಮೇಶ್ವರ, ಮುರಿಗೆಪ್ಪ ಜಮಖಂಡಿ, ಶಂಭುಲಿಂಗ ಕಾಂಬಳೆ, ಚಿದಾನಂದ ಪಾಟೀಲ, ಶ್ರೀಶೈಲ ಬರಲಿ, ನಾಗೇಶ ಕೊಕಟನೂರ, ಮಹಾಂತೇಶ ಪೂಜಾರಿ, ಅಶೋಕ ವನಮಾನೆ, ಶಿವಾನಂದ ನಂದೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net