ಎಲ್ಲರಿಗೂ ಶಿಕ್ಷಣ ನೀಡಿದ ಸಿದ್ಧಗಂಗಾ ಶ್ರೀಗಳು

PHOTO-2025-01-21-17-34-41
Published on

ಎಚ್.ಡಿ.ಕೋಟೆ: ಇಳಿವಯಸ್ಸಿನಲ್ಲೂ ಯುವಕರು ನಾಚುವಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ, ಅಜ್ಞಾನದ ಜಗವನ್ನು ಸುಜ್ಞಾನದತ್ತ ಕೊಂಡೊಯ್ಯಲು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಶ್ರಮಿಸಿದ್ದರು ಎಂದು ಪಡುವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹಳೇ ಆಸ್ಪತ್ರೆ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಯುವ ಘಟಕದಿಂದ ಮಂಗಳವಾರ ಶ್ರೀ ಶಿವಕುಮಾರಸ್ವಾಮೀಜಿ, ರಾಜೇಂದ್ರ ಸ್ವಾಮೀಜಿ ಮತ್ತು ಸಿದ್ದೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿದ್ಧಗಂಗಾ ಶ್ರೀಗಳ ಪರಿಶ್ರಮದಿಂದಾಗಿ ಇಂದು ಅದೆಷ್ಟೋ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಜಾತಿ, ಮತ, ಪಂಥ, ಭೇದ ಮಾಡದೆ ದಾಸೋಹ ಮತ್ತು ಶಿಕ್ಷಣವನ್ನು ನೀಡಿರುವುದನ್ನು ಯಾರೂ ಮರೆಯಬಾರದು. ಅವರ ಆಶಯದಂತೆ ಮಠ ನಡೆತ್ತಿದೆ. ಅದೇ ರೀತಿ ಸಿದ್ದೇಶ್ವರ ಸ್ವಾಮೀಜಿ ಸಹ ತಮ್ಮ ವಿಚಾರಧಾರೆಗಳಿಂದ ಅಗಣ್ಯ ಭಕ್ತವೃಂದವನ್ನು ಹೊಂದಿದ್ದರು. ಅವರ ಸರಳತೆಯೇ ಇತರರಿಗೆ ಪಾಠವಾಗಿದೆ. ಅವರ ಜೀವನವು ವಿಶ್ವ ವಿದ್ಯಾಲಯಕ್ಕೆ ಸಮ ಎಂದರು.

ದಡದಹಳ್ಳಿ ದಾಸೋಹ ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ ಸಿದ್ಧಗಂಗಾ ಶ್ರೀಗಳು ಹಾಗೂ ಸಿದ್ದೇಶ್ವರ ಶ್ರೀಗಳ ಕಾರ್ಯವನ್ನು ಶ್ಲಾಘಿಸಿದರು.

ಹಂಚೀಪುರ ಸಿದ್ದಮಲ್ಲೇಶ್ವರ ದಾಸೋಹ ಮಠದ ತೋಂಟದಾರ್ಯ ಸ್ವಾಮೀಜಿ, ಜಕ್ಕಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ, ವೀರಶೈವ ಮಹಸಭಾ ತಾಲೂಕು ಅಧ್ಯಕ್ಷ ರುದ್ರಪ್ಪ, ಜಿಲ್ಲಾಧ್ಯಕ್ಷ ಬಸವರಾಜು, ರಾಜ್ಯ ಸಮಿತಿ ಸದಸ್ಯ ಬಸವರಾಜಪ್ಪ, ಯುವ ಘಟಕದ ತಾಲೂಕು ಅಧ್ಯಕ್ಷ ಸತೀಶ್ ಬಹದ್ದೂರ್, ಜಿಲ್ಲಾ ಉಪಾಧ್ಯಕ್ಷ ಬಿ.ವಿ. ಬಸವರಾಜು, ಮುಖಂಡರಾದ ಕೃಷ್ಣನಾಯಕ, ನಂದೀಶ್, ಗಿರಿಕುಮಾರ್, ಜೆ.ಪಿ.ಚಂದ್ರಶೇಖರ್, ಅರ್ಜುನ್ ಪಾರ್ಥ, ಶಿವಸ್ವಾಮಿ, ಕೆಂಡಗಣ್ಣಸ್ವಾಮಿ, ಲೋಕೇಶ್, ನಾಗಣ್ಣ, ದೇವಮ್ಮಣಿ, ಜಗದೀಶ್, ವೆಂಕಟಸ್ವಾಮಿ, ಶಂಭುಗೌಡ, ಚಂದ್ರಮೌಳೇಶ್ವರ, ಕಾಶಿಪತಿ, ಡೈರಿ ಶ್ರೀಕಾಂತ್, ವಿನಯ್ ಭಜರಂಗಿ, ಕನ್ನಡ ಪ್ರಮೋದ್, ರವೀಶ್, ಜೆ.ಪಿ. ಶಿವರಾಜು, ಗುರುಸ್ವಾಮಿ, ನೀಲಪ್ಪ, ಕೂಸಮ್ಮ, ಮಹದೇವಪ್ಪ, ರಾಜಣ್ಣ ಕಾಡಸೂರು, ಸತೀಶ್, ಸುಮಾ ಸಂತೋಷ್, ಮಲ್ಲೇಶ್, ವೃಷಭೇಂದ್ರ, ಪೃಥ್ವಿ ಕುಮಾರ್, ಗಿರೀಶ್, ಮನು, ನಂಜುಂಡ, ಗುರು, ಶಿವಕುಮಾರ್, ಮಹದೇವಸ್ವಾಮಿ, ನವೀನ್, ಅಭಿ, ಯೋಗೇಶ್ ಮನು, ಕುಮಾರ್, ವೈ.ಟಿ. ಮಹೇಶ್, ಎಚ್.ಸಿ. ಶಿವಣ್ಣ, ರಮೇಶ್, ಚನ್ನಪ್ಪ, ಮಾದರಾಜು, ಶಿವಯ್ಯ, ಮಹದೇವಪ್ಪ, ವಿವೇಕ್, ಮಲಾರ ಪುಟ್ಟಯ್ಯ, ಹಂಚೀಪುರ ಗುರುಸ್ವಾಮಿ, ದಾಸನಾಯಕ, ನಾಗರಾಜಪ್ಪ, ಚಂದ್ರು, ಶಿವರುದ್ರ, ಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net