ಎಲ್ಲರಿಗೂ ಕಾನೂನು ಅರಿವು ಮುಖ್ಯ

10-6
ಸವದತ್ತಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ವಿಶ್ವ ಪೌಷ್ಟಿಕಾಂಶ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಹೆಚ್ಚುವರಿ ಪ್ರಧಾನ ದಿವಾಣಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ ಉದ್ಘಾಟಿಸಿದರು. ಆರ್.ಪಿ. ತೋಟಗಿ, ಕಾಂಚನಾ ಅಮಠೆ, ಎಸ್.ಎಂ. ನದಾಫ್, ಸಿ.ವಿ. ಸಾಂಬಯ್ಯನಮಠ, ಪಿ.ಎನ್. ಡೊಳ್ಳಿನ, ಎಸ್.ಎಸ್. ಮಾನೆ ಇತರರಿದ್ದರು.
Published on

ಸವದತ್ತಿ, ಬೆಳಗಾವಿ: ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಿದರೆ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುತ್ತಾರೆ. ತಾಯಿ ಮಕ್ಕಳು ಆರೋಗ್ಯವಾಗಿರಲು ಪೋಷಕಾಂಶಯುಕ್ತ ಆಹಾರ ಸೇವನೆ ಅಗತ್ಯ ಎಂದು ಹೆಚ್ಚುವರಿ ಪ್ರಧಾನ ದಿವಾಣಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಶಿಶು ಅಭಿವೃದ್ಧಿ ಯೋಜನೆ, ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದಿಂದ ವಿಶ್ವ ಪೌಷ್ಟಿಕಾಂಶ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೌಷ್ಟಿಕ ಆಹಾರ ಪಡೆಯುವುದು ಎಲ್ಲರ ಹಕ್ಕಾಗಿದ್ದು ಜನರಲ್ಲಿ ಕಾನೂನು ಅರಿವು ಹೆಚ್ಚಾಗಬೇಕಿದೆ. ಪೋಷಕಾಂಶಯುಕ್ತ ಆಹಾರ ಸೇವಿಸುವುದು ಪ್ರತಿ ಮಗುವಿನ ಮೂಲಭೂತ ಹಕ್ಕಾಗಿದೆ. ಸರ್ಕಾರ ಪೋಷಣ್ ಅಭಿಯಾನದ ಮುಖಾಂತರ ಗರ್ಭಿಣಿ, ಬಾಣಂತಿ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಸೌಲಭ್ಯ ನೀಡುತ್ತಿದೆ. ಸದೃಢ ಸಮಾಜ ನಿರ್ಮಿಸಲು ಅಧಿಕಾರಿಗಳು ಆಹಾರದ ಕಿಟ್ ತಲುಪುವಂತೆ ನೋಡಿಕೊಳ್ಳಬೇಕು ಎಂದರು.

ನ್ಯಾಯವಾದಿ ಆರ್.ಪಿ. ತೋಟಗಿ ಮಹಿಳಾ ಕಾನೂನು ಕುರಿತು ಮಾಹಿತಿ ನೀಡಿದರು. ಪೌಷ್ಟಿಕ ಆಹಾರ ಪ್ರದರ್ಶನ ಜರುಗಿತು. ಸಿಡಿಪಿಒ ಕಾಂಚನಾ ಅಮಠೆ, ಎಸ್.ಎಂ. ನದಾಫ್, ಸಿ.ವಿ. ಸಾಂಬಯ್ಯನಮಠ, ಪಿ.ಎನ್. ಡೊಳ್ಳಿನ, ಎಸ್.ಎಸ್. ಮಾನೆ, ವೈ.ಎನ್. ಪಾಸ್ತೆ, ಎಸ್.ವಿ ಶಿರಹಟ್ಟಿಮಠ, ಎನ್.ಎಸ್. ವಂಟಮೂರಿ, ಜೆ.ಎಚ್. ಪೂಜೇರ, ಎ.ಕೆ. ಅರವಾಳ, ಸುನಿತಾ ಗೊಂದಕರ, ಎ.ಎಸ್. ಮಾನಗಾಂವ, ನೀಲಮ್ಮ ಪಟ್ಟಣ, ಆರ್.ಪಿ. ರಾಮದುರ್ಗ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net