ಎಲ್ಲರನ್ನೂ ಒಗ್ಗೂಡಿಸಿ ಸಾಗುವವನೇ ಜನನಾಯಕ

2703Aland1
Published on

ಆಳಂದ: ಗ್ರಾಮ, ಪಟ್ಟಣ, ರಾಜ್ಯ, ಜಾತಿ, ಧರ್ಮ ಅನ್ನೋದಕ್ಕಿಂತ ನಾವೆಲ್ಲರೂ ದೇಶದ ಪ್ರಜೆಗಳು, ಭಾರತಮಾತೆ ಮಕ್ಕಳು ಎಂಬ ಭಾವನೆಯೊಂದಿಗೆ ಜೀವನ ನಡೆಸಬೇಕು. ಎಲ್ಲರನ್ನೂ ಒಗ್ಗೂಡಿಸಿ ಹೋಗುವವನೇ ನಿಜವಾದ ಜನನಾಯಕ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.
ಧುತ್ತರಗಾಂವ್ದಲ್ಲಿ ಶ್ರೀ ವೀರೇಶ್ವರ ಶರಣರ ಜಾತ್ರೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಶಿಲಾಮಂಟಪ ಉದ್ಘಾಟನೆ ಹಾಗೂ ಲಕ್ಷ ದೀಪೋತ್ಸವ, ಧರ್ಮ ಸಭೆಯನ್ನು ಉದ್ಘಾಟಿಸಿ ಆಶಿರ್ವಚನ ನೀಡಿ, ನಾಡು ಸಮೃದ್ಧವಾಗಿರಲಿ. ಒಳ್ಳೆಯ ಮಳೆ, ಬೆಳೆಯಾಗಲಿ, ಬೆಳೆಗೆ ತಕ್ಕ ಬೆಲೆ ದೊರೆತು ಅನ್ನದಾತನ ಬದುಕು ಉತ್ತಮಗೊಳ್ಳಲಿ ಎಂದು ಹಾರೈಸಿದರು.

ಶಾಸಕ ಸುಭಾಷ ಗುತ್ತೇದಾರ್ ಮಾತನಾಡಿ, ವೀರೇಶ್ವರ ಶರಣರು ಭಕ್ತರ ಬಾಳು ಬೆಳಗಿದ್ದಾರೆ. ಉಜ್ಜಯಿನಿ ಜಗದ್ಗುರುಗಳ ಆಗಮನದಿಂದ ಧುತ್ತರಗಾಂವ್ ಪುಣ್ಯಕ್ಷೇತ್ರವಾಗಿದ್ದು, ಭಕ್ತರ ಬದುಕು ಹಸನಾಗಲಿ. ದೇವಸ್ಥಾನ ಅಡಿಯಲ್ಲಿ ಕಲ್ಯಾಣ ಮಂಟಪ ನಿಮರ್ಿಸುವಂತೆ ಮನವಿ ಮಾಡಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ಅಧ್ಯಕ್ಷತೆ, ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ನರೋಣಾದ ಗುರುಮಹಾಂತ ಶ್ರೀ, ಭೂಸನೂರಿನ ಶಂಭುಸೋಮನಾಥ ಶ್ರೀ, ಮೋಲಕೂಡದ ಗುರುಲಿಂಗ ಶ್ರೀ, ಬಾವಿನಾಲಾದ ಶರಣೆ ಸಿದ್ಧಮ್ಮಾಂಬೆ ಸಾನ್ನಿಧ್ಯ ವಹಿಸಿದ್ದರು. ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಪ್ರಮುಖರಾದ ರಾಜಶೇಖರ ಮಲಶೆಟ್ಟಿ, ಚಂದುರಾವ್ ಕುಲಕಣರ್ಿ, ದಯಾನಂದ ಪಾಟೀಲ್, ಜಗನಾಥ ಶೇಗಜಿ ಇತರರಿದ್ದರು. ಚಂದ್ರಶೇಖರ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಎಸ್. ಮಂಗಾಣೆ ಸ್ವಾಗತಿಸಿದರು. ವೀರಣ್ಣ ಜಿ. ಹೊನ್ನಶೆಟ್ಟಿ ವಂದಿಸಿದರು. ಗುರುಲಿಂಗಯ್ಯ ಸ್ವಾಮಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net