

ಚಿತ್ರದುರ್ಗ: ಕರ್ನಾಟಕದಲ್ಲಿ 2025ಕ್ಕೆ ಮಲೇರಿಯಾ ನಿವಾರಣಾ ಗುರಿ ಹೊಂದಲಾಗಿದ್ದು,ಶೀಘ್ರ ರೋಗ ಪತ್ತೆ,ಸಂಪೂರ್ಣ ಚಿಕಿತ್ಸೆಯೊಂದಿಗೆ ಸಾವು -ನೋವು ನಿಯಂತ್ರಿಸಬಹುದೆಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ಜಿಲ್ಲಾಡಳಿತ,ಜಿಪಂ,ರಾಷ್ಟ್ರೀಯ ಆರೋಗ್ಯ ಅಭಿಯಾನ,ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯ ಂತ್ರಣ ಅಧಿಕಾರಿ ಕಚೇರಿ ಸಹಯೋಗದಲ್ಲಿ ಶುಕ್ರವಾರ ನಗರದ ಎಸ್‌ಜಿ ಪ್ಯಾರಾಮೆಡಿಕಲ್ ಕಾಲೇಜು ಆವರಣದಲ್ಲಿ ವಿಶ್ವ ಮಲೇರಿಯಾ ದಿ ನದ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲರ ಸಹಭಾಗಿತ್ವದಿಂದ ಮಲೇರಿಯಾ ನಿವಾರಣೆ ಸಾಧ್ಯ. ವಿಶ್ವ ಮಲೇರಿಯಾ ದಿನದ ಈ ಬಾರಿಯ ಘೋಷವಾಕ್ಯ‘ಹೆಚ್ಚು ಸಮಾನತೆ ಯ ಜಗತ್ತಿಗೆ ಮಲೇರಿಯಾ ವಿರುದ್ಧ ಹೋರಾಟವನ್ನು ತೀವ್ರಗೊಳಿಸೋಣ’ಎಂಬುದಾಗಿದೆ.
ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಮಲೇರಿಯಾ ನಿಯಂತ್ರಣದಲ್ಲಿದೆ. ಯಾವುದೇ ಪ್ರಕರಣ ಕಂಡುಬಂದಿಲ್ಲ. ಆದಾಗ್ಯೂ ಕೂಡ ಮ ಲೇರಿಯಾ ಕುರಿತಂತೆ ಜಾಗೃತಿ ಅಗತ್ಯ. ಮಲೇರಿಯಾ ತುಂಬಾ ಆತಂಕಕಾರಿಯಾದದ್ದು,ಈ ರೋಗ ಮಕ್ಕಳು ಹಾಗೂ ಗರ್ಭಿಣಿಯರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಯಾವುದೇ ಜ್ವರವಿರಲಿ ಕೂಡಲೇ ಚಿಕಿತ್ಸೆ ಪಡೆಯಬೇಕೆಂದರು.
ಕಾಲೇಜು ಆವರಣದಿಂದ ಆರಂಭವಾದ ಜಾಥಾ ಉಚ್ಚಂಗಿಯಲ್ಲಮ್ಮ,ಈಶ್ವರ ದೇವಸ್ಥಾನ ಮಾರ್ಗವಾಗಿ ಕರುವಿನ ಕಟ್ಟೆ ವೃತ್ತದಿಂದ ಮ ರಳಿ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡಿತು. ಮಲೇರಿಯಾ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ,ಸೊಳ್ಳೆ ಪರದೆ ಬಳಸಿ,ಮಲೇರಿ ಯಾ ಓಡಿಸಿ,ಜನರ ಅಮೂಲ್ಯ ಜೀವನ ಉಳಿಸಿವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂಬ ವಿವಿಧ ಘೋಷಣೆಗಳು ಜಾಥಾದಲ್ಲಿ ಕೇಳಿ ಬಂ ದವು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂ ಬಾಳಿಮಠ್,ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ಕೀಟಶಾಸ್ತ್ರಜ್ಞೆ ಡಾ.ನಂದಿನಿಕಡಿ, ಎಸ್‌ಜಿ ಪ್ಯಾರಾಮೆಡಿಕಲ್ ಕಾಲೇಜು ಅಧ್ಯಕ್ಷ ಡಾ.ಶಿವಲಿಂಗಯ್ಯ,ಪ್ರಾಂಶುಪಾಲ ಚಂದ್ರಶೇಖರ್,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮತ್ತಿತರರು ಇದ್ದರು.