ಎಲ್ಲರ ವಿಶ್ವಾಸದೊಂದಿಗೆ ಪಕ್ಷ ಸಂಘಟಿಸಿ

CTD 15 BJP--03
Published on

ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟ ನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಎಂಎಲ್‌ಸಿ ಕೆ.ಎಸ್.ನವೀನ್,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಅವರಿಗೆ ಸಲಹೆ ನೀಡಿದ ರು.
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ನೇಮಕವಾಗಿರುವ ಎ.ಮುರಳಿ ಅವರಿಗೆ ಪಕ್ಷದ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿ ದ್ದ ಅಭಿನಂದನಾ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಅವಧಿಯ ಸಾಧನೆ,ಪಕ್ಷ ನಿಷ್ಠೆಯನ್ನು ಗುರುತಿಸಿ ಪಕ್ಷದ ಹಿರಿಯರು ಮತ್ತೆ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ವರಿಷ್ಠರ ಈ ವಿಶ್ವಾಸಕ್ಕೆ ಧಕ್ಕೆ ಆಗದಂತೆ ತಾವು ಕಾರ‌್ಯನಿರ್ವಹಿಸಬೇಕಿದೆ ಎಂದು ಕಿವಿಮಾತು ಹೇಳಿದರು. ಮುರುಳಿ ಮಾತನಾಡಿ ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಯ ಕೆಲಸ ವಡುವುದಾಗಿ ಹೇಳಿದರು.
ಪಕ್ಷದ ಸಂಘಟನಾತ್ಮಕ ಜಿಲ್ಲೆ ಮಧುಗಿರಿ ಜಿಲ್ಲಾ ನೂತನ ಹನುಮಂತೇಗೌಡ, ಕುಡಾ ಮಾಜಿ ಅಧ್ಯಕ್ಷ ಸುರೇಶ್‌ಸಿದ್ದಾಪುರ,ಮಾಧುರಿಗಿ ರೀಶ್,ನರೇಂದ್ರಹೊನ್ನಾಳ್,ಸಂಪತ್‌ಕುಮಾರ್, ದಗ್ಗೆಶಿವಪ್ರಕಾಶ್,ನಾಗರಾಜ್ ಬೇದ್ರೆ, ಡಿ.ಕೆ.ಜಯಣ್ಣ,ಶಿವಣ್ಣಾಚಾರ್,ನವೀನ್‌ಚಾಲುಕ್ಯ,ನಂದಿನಾಗರಾಜ್,ಶ್ಯಾಮಲಾಶಿವಪ್ರಕಾಶ್,ಕಿರಣ್‌ಕುಮಾರ್,ವೀರೇಶ್‌ಜಾಲಿಕಟ್ಟೆ, ಪರಶುರಾಮ್, ಡಾ.ಮಂಜುನಾಥ್,ರಾಮರೆಡ್ಡಿ,ಭಾ ರ್ಗವಿ ದ್ರಾವಿಡ, ಬಸಮ್ಮ,ಶಂಭು,ಯಶವಂತ್,ವಿರುಪಾಕ್ಷಿ, ಮನೋಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net