

ಚಿತ್ರದುರ್ಗ: ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋ ಜನೆ ತಾಲೂಕು ಯೋಜನಾಧಿಕಾರಿ ಎ.ಜೆ.ಪ್ರವೀಣ್ ಹೇಳಿದರು.
ನಗರದ ಹೊರವಲಯ ಮಾಳಪ್ಪನಹಟ್ಟಿ ಪ್ರಗತಿ ಜ್ಞಾನವಿಕಾಸ ಕೇಂದ್ರ ದಲ್ಲಿ ಶನಿವಾರ ಏರ್ಪಡಿಸಿದ್ದ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ವಿವರಿಸಿ ದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್‌ಸಂಗಮ್,ವಕೀಲರ ಸಂಘದ ಉಪಾಧ್ಯಕ್ಷ ದಯಾನಂದ್,ವಕೀಲ ಮಾಲತೇಶ್‌ಅರಸ್, ಗ್ರಾಪಂ ಪಿಡಿಒ ರೂಪಾಕುಮಾರಿ,ಕಿರಣ್,ಗುರುಸ್ವಾಮಿ,ಶೇಖರ್‌ಗೌಡ,ಶಿವಲೀಲಾ ಎಸ್.ಬಾಗೋಡಿ,ಮಂಜುಳಾ,ವೆಂಕಟೇಶ್,ಶೃತಿ, ಜ್ಯೋತಿ,ಭವ್ಯ,ಕವಿತಾ,ರತ್ನಮ್ಮ,ರಾಧ,ಪ್ರಗತಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಇದ್ದರು.