

ಚಿತ್ರದುರ್ಗ: ನಗರದ ಎಲ್ಲ ಉದ್ಯಾನಗಳಲ್ಲಿ ಓಪನ್ ಜಿಮ್ ಮತ್ತು ಯೋಗ ಪ್ಲಾಟ್‌ಫಾರಂ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು. ಪತಂಜಲಿ ಯೋಗ ಸಂಸ್ಥೆಯಿಂದ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ನನ್ನ ಯೋಗ ನನ್ನ ಕ್ಷೇಮ ಎನ್ನುವ ಧ್ಯೇಯದೊಂದಿಗೆ ಸಹ ಯೋಗ ಶಿಕ್ಷಕರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ,ಯೋಗವು ಸಮಾಜದ ಎಲ್ಲ ಜನರ ಆರೋಗ್ಯಕ್ಕೆ ಅಗತ್ಯವಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಯೋಗವು ಜೀ ವನಕ್ಕೆ ಅವಶ್ಯವಿದೆ ಎಂದರು. ಉದ್ಯಮಿ ಭರತ್ ಕುಮಾರ್ ಮಾತನಾಡಿದರು.
ಪತಂಜಲಿ ಯೋಗ ಸಂಸ್ಥೆ ದಕ್ಷಿಣ ಭಾರತದ ಪ್ರಭಾರಿ ಭವರಲಾಲ್‌ಆರ್ಯ,ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಶ್ರೇ ಷ್ಠಿ,ವೈದ್ಯಾಧಿಕಾರಿ ಡಾ.ರವಿಕುಮಾರ್,ಲತಾರವಿ,ಪತಂಜಲಿ ಸಂಸ್ಥೆ ಚಿತ್ರದುರ್ಗ ಪ್ರಭಾರಿಗಳಾದ ದೇವಾನಂದ ನಾಯ್ಕ,ಶ್ರೀನಿವಾಸ್,ಗು ರುಮೂರ್ತಿ, ಕೆಂಚವೀರಪ್ಪ, ಶ್ರೀರಾಮ್‌ನರೇಶ್,ನವೀನ್,ಕೃಷ್ಣಮೂರ್ತಿ ಮತ್ತಿತರರು ಇದ್ದರು.