ಎಲ್ಲ ಹಳ್ಳಿಗಳಿಗೆ ಬಸ್ ಓಡಿಸಿ

ABVP
Published on

ಬೀದರ್: ಜಿಲ್ಲಾದ್ಯಂತ ಶಾಲಾ-ಕಾಲೇಜು ಪ್ರಾರಂಭವಾಗಿವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ಹಳ್ಳಿಗಳಿಗೆ ಮೊದಲಿನಂತೆ ಬಸ್ಗಳನ್ನು ಓಡಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರ ಹಳೆಯ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಶಾಲಾ-ಕಾಲೇಜು ಆರಂಭವಾದರೂ ಈವರೆಗೆ ಅನೇಕ ಹಳ್ಳಿಗಳಿಗೆ ಬಸ್ಗಳು ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಖಾಸಗಿ ವಾಹನಕ್ಕೆ ಮೊರೆ ಹೋದರೆ, ಬಡ ವಿದ್ಯಾರ್ಥಿಗಳು ಪಾಠ ಪ್ರವಚನದಿಂದ ದೂರ ಉಳಿದಿದ್ದಾರೆ. ಕೂಡಲೆ ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಸಮರ್ಪಕವಾಗಿ ಮೊದಲಿನಂತೆ ಬಸ್ ಓಡಿಸಬೇಕು. ಸ್ಥಳೀಯ ಹಾಗೂ ಅಂತರರಾಜ್ಯಗಳಿಗೆ ಸಂಚರಿಸುವ ಬಸ್ ಗಳಿಗೂ ಬಸ್ ಪಾಸ್ ಗೆ ಅನುಮತಿ ನೀಡಬೇಕು. ತಾಲೂಕು ಕೇಂದ್ರದಲ್ಲಿಯೇ ಪಾಸ್ ವಿರತಣಾ ಕೇಂದ್ರ ಆರಂಭಿಸಬೇಕು. ಪಾಸ್ ವಿತರಣೆ ಗೊಂದಲ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ. ಬೇಡಿಕೆ ಸಂಬಂಧ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್, ನಗರ ಕಾರ್ಯದರ್ಶಿ ಪ್ರದೀಪರೆಡ್ಡಿ, ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ, ಪ್ರಮುಖರಾದ ನಾಗೇಶ ಬಿರಾದಾರ, ಅಮರ ಸುಲ್ತಾನಪುರೆ, ಸಾಯಿ ಮೂಲಗೆ, ಲಿಂಗರಾಜ ಮರಕಲ್, ಅಭಿಷೇಕ, ವೀರೇಶ ರೇಕುಳಗಿ, ಶಿವಾನಂದ ಚಿಮಕೋಡೆ, ಸುನೀಲ ಉಪ್ಪೆ, ಕಿರಣಕುಮಾರ, ವಿಕಾಶ ಚೋರಮಲ್ಲೆ, ವಿರೇಶ ಹಡಪದ, ವಿರೇಂದ್ರ ಜಿಂದೆ, ಪರಶುರಾಮ ಸಿಂಧೆ, ಆಶಾ, ಪ್ರಿಯಾಂಕ, ರಕ್ಷಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net