ಎಲ್ಲ ಸಾಹಿತ್ಯಕ್ಕೂ ಜನಪದ ಸಾಹಿತ್ಯ ತಾಯಿ ಬೇರಿದ್ದಂತೆ

ಎಲ್ಲ ಸಾಹಿತ್ಯಕ್ಕೂ ಜನಪದ ಸಾಹಿತ್ಯ ತಾಯಿ ಬೇರಿದ್ದಂತೆ
Published on

ಬೇಲೂರು: ಎಲ್ಲ ಸಾಹಿತ್ಯಕ್ಕೂ ಜನಪದ ಸಾಹಿತ್ಯ ತಾಯಿ ಬೇರಿದ್ದಂತೆ. ಕನ್ನಡ ಸಾಹಿತ್ಯದಲ್ಲೂ ಜನಪದ ಅಡಕವಾಗಿದ್ದು ಇದನ್ನು ಸಂರಕ್ಷಿಸಲು ಯುವ ಸಮುದಾಯ ಮುಂದಾಗಬೇಕು ಎಂದು ವಿಶ್ವ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಪ್ರೋ.ಜಯಣ್ಣಗೌಡ ಹೇಳಿದರು.


ಪಟ್ಟಣದ ವಿಶ್ವ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕು ಜನಪದ ಸಾಹಿತ್ಯ ಪರಿ?ತ್ತು ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಾಹಿತಿ ಇಂದಿರಮ್ಮರವರ ನಮ್ಮೂರ ಚಲುವ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಅಭಿಮಾನ ಮೂಡಬೇಕು. ಆಗ ಮಾತ್ರ ಉತ್ತಮ ಸಾಹಿತಿಯಾಗಲು ಸಾಧ್ಯ. ಆದರೆ ಇತ್ತೀಚಿನ ಕೆಲ ಕೃತಿಗಳಲ್ಲಿ ತಿರುಳಿಲ್ಲದ ಮತ್ತು ಯಾವುದೇ ಸಂದೇಶವಿಲ್ಲದ ಕೃತಿಗಳು ಹೊರ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಇಂದಿರಮ್ಮನವರ ನಮ್ಮೂರ ಚಲುವ ಕೃತಿ, ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಲಿದೆ. ಇತ್ತೀಚಿನ ವಚನ ಸಾಹಿತ್ಯದ ಪ್ರಕಾರಗಳ ಜನಮೆಚ್ಚುಗೆ ಗಮನಿಸಬೇಕಾಗಿದೆ. ಇಂದಿರಮ್ಮನವರು ಗಮಕಿಯಾಗಿ, ಗಾಯಕಿಯಾಗಿ, ಪೌರಾಣಿಕ ನಾಟಕ ರಚನೆಯಲ್ಲಿ ಕೂಡ ತೋಡಗಿರುವುದು ಸಾಹಿತ್ಯ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಲಿ ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಸಾಹಿತ್ಯದ ಓದು ವ್ಯಕ್ತಿಯ ವ್ಯಕ್ತಿತ್ವದ ವಿಕಾಸನ ಜತೆ ಸಂಸ್ಕಾರ, ಸಂಯಮ, ಸಹಬಾಳ್ವೆ, ಸಾಮರಸ್ಯವನ್ನು ಮೂಡಿಸುತ್ತದೆ. ಸಾಹಿತ್ಯ ಇಂದಿನ ಯುವ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಜನಪದ ಸಾಹಿತ್ಯ ಪರಿ?ತ್ತು ಜೊತೆ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯಗಳ ಪರಿಚಯ ಮಾಡುತ್ತಿದೆ. ವಿದ್ಯಾರ್ಥಿಗಳು ಸಹ ತಮ್ಮ ಪಠ್ಯಗಳ ಜತೆಯಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.


ನಮ್ಮೂರ ಚಲುವ ಕೃತಿ ಪರಿಚಯಿಸಿ ಮಾತನಾಡಿದ ಜನಪದ ಸಾಹಿತ್ಯ ಪರಿ?ತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ, ಪುಸ್ತಕದ ಜ್ಞಾನದಿಂದ ವ್ಯಕ್ತಿ ತನ್ನ ಅಪರಿಮಿತ ಜ್ಞಾನ ಗಳಿಸಬಹುದು ಎಂಬುದನ್ನು ಈಗಾಗಲೇ ದೊಡ್ಡ ದೊಡ್ಡ ಮಹಾನ್ ಪುರು?ರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಹಿತಿ ಇಂದಿರಮ್ಮ ತಮ್ಮ ಮನದಾಳದ ಮಾತುಗಳಿಗೆ ಅಕ್ಷರ ರೂಪ ಕೊಟ್ಟು ಕನ್ನಡ ಸಾಹಿತ್ಯ ಲೋಕ್ಕೆಕ್ಕೆ ಉತ್ತಮ ಕವನ ಸಂಕಲ ನೀಡಿದ್ದಾರೆ ಎಂದರು.
ಸಾಹಿತಿ ಇಂದಿರಮ್ಮ, ಅರೇಹಳ್ಳಿ ರೋಟರಿ ಸಂಸ್ಥೆ ಅಧ್ಯಕ್ಷ ನದೀಮ್ ಇಕ್ಬಾಲ್, ವಿಶ್ವ ಪ್ರೌಢಶಾಲೆ ಮುಖ್ಯ ಶಿಕ್ಷಕ ವೆಂಕಟೇಶ್, ಕಸಾಪ ಮಾಜಿ.ಗೌ.ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ಬಳಕೆದಾರರ ಸಂಘದ ಕಾರ್ಯದರ್ಶಿ ಸುಲೇಮಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net