

ಚಿತ್ರದುರ್ಗ: ಸಾಮೂಹಿಕ ವಿವಾಹ ಮಹೋತ್ಸವ,ದೇವಾಲಯ ಮತ್ತಿತರೆಡೆ ಮದುವೆಯಾಗುವವರು ಬಡವರೆಂದು ಹೇಳುತ್ತಿದ್ದ ಕಾಲ ಈಗಿಲ್ಲ.ಬಡವ, ಬಲ್ಲಿದ ಎನ್ನದೆ ಒಂದೇ ವೇದಿಕೆಯಲ್ಲಿ ಸತಿಪತಿಗಳಾಗುವ ಅವಕಾಶವನ್ನು ಶ್ರೀ ಮುರುಘಾ ಮಠ ಒದಗಿಸುತ್ತಾ ಬಂದಿದೆ ಶ್ರೀ ಶಿವಶರಣ ಮಾ ದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಮುರುಘಾ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ 34ನೇ ವರ್ಷದ 7ನೇ ತಿಂಗಳ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾ ತನಾಡಿದ ಅವರು, ಶ್ರೀ ಮಠದಲ್ಲಿ ಪ್ರತಿ ತಿಂಗಳು 5ರಂದು ಏರ್ಪಡಿಸುವ ಸಾಮೂಹಿಕ ಕಲ್ಯಾಣ ಮಹೋತ್ಸವ ಕಳೆದ ಮೂರೂವರೆ ದಶಕ ಗಳಿಂದ ಅನೂಚಾನವಾಗಿ ನಡೆದು ದಾಖಲೆ ನಿರ್ಮಿಸಿದೆ.
ಇಲ್ಲಿ ಬಡವರು,ಬಲ್ಲಿದರೆನ್ನುವ ಬೇಧವಿಲ್ಲ. ಶಾಸ್ತ್ರ,ಸಂಪ್ರದಾಯಗಳ ಗೊಡವೆ ಇಲ್ಲ. ಬಸವಾದಿ ಶಿವಶರಣರ ಆಶಯದಂತೆ ಎಲ್ಲ ಸಮಯ ವೂ ಶುಭಸಮಯವಾಗಿದೆ,ಎಲ್ಲ ಕಾಲದಲ್ಲೂ ಮದುವೆಗಳಾಗಿವೆ. ಎರಡು ದಶಕಗಳ ಹಿಂದೆ ಅಮಾವಾಸ್ಯೆ ದಿನದಂದು 101 ಜೋಡಿ ಮ ದುವೆಯಾಗಿದ್ದನ್ನು ಸ್ಮರಿಸಬಹುದಾಗಿದೆ. ಈ ಕಾರ‌್ಯಕ್ರಮ ಲಿಂಗಾಯತ ಜಾತಿಗೆ ಸೀಮಿತವಾಗದೆ ಶೋಷಿತ,ಅಲಕ್ಷಿತ ಸಮಾಜಗಳ ಕಲ್ಯಾಣಕ್ಕೆ ವರದಾನವಾಗಿದೆ.
ಬಡ ವಧು-ವರರರು ವಿವಾಹವಾಗಲು ಈ ಹಿಂದೆ ಧರ್ಮಸ್ಥಳ ಮತ್ತಿತರ ಶ್ರೀ ಕ್ಷೇತ್ರಗಳಿಗೆ ಹೋಗಬೇಕಿತ್ತು. ಮುಹೂರ್ತಗಳಿಗೆ ಮಹತ್ವ ನೀಡದೆ 5ನೇ ತಾರೀಖು,ಅದು ಯಾವುದೇ ದಿನವಾಗಿರಲಿ ಸಾಮೂಹಿಕ ವಿವಾಹ ಕಾರ‌್ಯಕ್ರಮ ನಡೆದಿದೆ. ಇದಕ್ಕೆ ಅಮಾವಾಸ್ಯೆ ದಿನ ಹಸೆ ಮ ಣೆ ಏರಿದ ದಂಪತಿಗಳೇ ಸಾಕ್ಷಿ ಎಂದರು.
ನೇತೃತ್ವ ವಹಿಸಿದ್ದ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ,ಈ ಮಠಕ್ಕೆ ಉಜ್ವಲ ಇತಿಹಾ ಸವಿದೆ. ಶ್ರೀಮಠದ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಕಾರ‌್ಯಕ್ರಮಗಳು ವಿಸ್ತಾರಗೊಂಡಿವೆ. ಸಾರ್ವಜನಿಕರು ಸತ್ಕಾರ್ಯಗಳಿಗೆ ಸಹಕಾರ ನೀ ಡುತ್ತ್ತಾ ಬಂದಿದ್ದಾರೆ. ಬದುಕಿನಲ್ಲಿ ಅಂಧಶ್ರದ್ಧೆ,ಆಲಸ್ಯ ತೊಡೆದು ಸರಳತೆ,ಸವಿನಯ,ಶಿಸ್ತನ್ನು ರೂಢಿಸಿಕೊಳ್ಳ ಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ,ಎಂಥದ್ದೇ ಸಂದರ್ಭದಲ್ಲೂ ಸಾಮೂಹಿಕ ಕಲ್ಯಾಣ ಮಹೋತ್ಸವ ಸ್ಥಗಿತವಾಗಿಲ್ಲವೆಂದರು. ಶಿರಸಂಗಿ ಶ್ರೀ ಬಸವಮಹಾಂತ ಸ್ವಾಮೀಜಿ ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವಿನ ಯ್‌ದೇವರು ಸ್ವಾಗತಿಸಿ, ನಿವೃತ್ತ ಉಪನ್ಯಾಸಕ ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು., ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.