ಎಲ್ಲ ರೈತರಿಗೂ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಡಿಸಿಗೆ ಮನವಿ

CTD 17 RITARARA MANAVI--00003
Published on

ಚಿತ್ರದುರ್ಗ: ಬೆಳೆವಿಮೆ ಮತ್ತು ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯ ನಿವಾರಿಸುವುದೂ ಸೇರಿದಂತೆ ನಾನಾ ಬೇಡಿಕೆಗಳ ಈ ಡೇರಿಕೆಗೆ ಆಗ್ರಹಿಸಿ ರೈತಸಂಘದ ಪ್ರಮುಖರು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. 2023 ಮತ್ತು 20 24ರ ಸಾಲಿನ ಬೆಳೆ ವಿಮೆ ಪರಿಹಾರ ಹಾಗೂ ಬರದಿಂದ ಬೆಳೆ ನಷ್ಟ ಅನುಭವಿಸಿರುವ ಎಲ್ಲ ರೈತರಿಗೂ ಪರಿಹಾರ ವಿತರಿಸಬೇಕು. ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಆಗಿರುವ ಅವ್ಯವಹಾರದ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.
ಬರಗಾಲ ಹಿನ್ನೆಲೆ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಿಸದೆ,ನಾಲ್ಕು ಕಂತುಗಳಲ್ಲಿ ಅದನ್ನು ಪಡೆಯುವಂತೆ ಸಂಬಂಧಿಸಿದವರಿಗೆ ನಿರ್ದೇಶಿಸ ಬೇಕು. ವಿಮಾಪರಿಹಾರ,ವಿಧವಾ ವೇತನ, ಅಂಗವಿಕಲ ವೇತನ, ವೃಧ್ಯಾಪ್ಯ ವೇತನ,ಪಿಎಂ ಕಿ ಸಾನ್ ಯೋಜನೆ ಇತ್ಯಾದಿ ಆರ್ಥಿಕ ನೆರವ ನ್ನು ಸಾಲಕ್ಕೆ ಜಮಾ ಪಡೆಯದೆ ವಿತರಿಸಬೇಕೆಂದು ಬ್ಯಾಂಕ್‌ಗಳಿಗೆ ಆದೇಶಿಸ ಬೇಕು.
ರೈತರ ಸಮ್ಮುಖದಲ್ಲಿ ತಹಸೀಲ್ದಾರ್‌ಗಳ ಸಭೆ ಕರೆದು ಅಹವಾಲುಗಳ ಅರ್ಜಿಗಳ ವಿಲೇವಾರಿಗೆ ತಾಕೀತು ಮಾಡಬೇಕು. ಹೊಲಗಳ ದಾರಿ ಸಮಸ್ಯೆ ಇತ್ಯರ್ಥಕ್ಕೂ ಅವರಿಗೆ ಸೂಚಿಸಬೇಕು. ಮುಂಗಾರು ಆರಂಭವಾಗಿರುವುದರಿಂದ ಬಿತ್ತನೆ ಬೀಜ,ಗೊಬ್ಬರಕ್ಕೆ ಸಮಸ್ಯೆ ಆಗ ದಂತೆ ಜಿಲ್ಲಾಡಳಿತ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸ ಬೇಕು. ಎಸ್ಸೆಸ್ಸೆಲ್ಸಿ,ಸೆಕೆಂಡ್ ಪಿಯುಸಿ ಫಲಿತಾಂಶ ಇಳಿಮುಖವಾಗಿದ್ದು,ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು. ರೈತರಿಗೆ ಸೂಕ್ತ ಪರಿಹಾರ ಕೊಡದೇ ದಬ್ಬಾಳಿಕೆ ಮೂ ಲಕ ಕೆಪಿಟಿಸಿಎಲ್ ಕಾಮಗಾರಿ ನಡೆಸಲು ಮುಂದಾಗಿರುವವರ ವಿರುದ್ಧವೂ ಕ್ರಮ ಜರುಗಿಸ ಬೇಕೆಂದು ಡಿಸಿಯನ್ನು ಒತ್ತಾಯಿಸಿದರು. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ,ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್,ಕೆ.ಟಿ.ತಿಪ್ಪೇಸ್ವಾಮಿ,ಬಸವರಾಜಪ್ಪ,ಚಂದ್ರ ಮೌಳಿ,ಹೊಸಟ್ಟಿ ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net