

ಕಲಬುರಗಿ: ಸಮಾಜದಲ್ಲಿ ಮಹಿಳೆಯ ಸ್ಥಾನಮಾನ ಮೊದಲಿಗಿಂತಲೂ ಹೆಚ್ಚಾಗಿದೆ. ವೃತ್ತಿಯ ಜತೆಗೆ ಮನೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವಂತ ಸವಾಲಿನ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ ಎಂದು ಖ್ಯಾತ ವೈದ್ಯೆ ಹಾಗೂ ಸಮಾಜ ಸೇವಕಿ ಡಾ.ಪ್ರತಿಮಾ ಕಾಮರಡ್ಡಿ ಹೇಳಿದರು.
ಶ್ರೀ ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟ್ ಅಡಿಯಲ್ಲಿ ನಗರದಲ್ಲಿ ನಡೆಯುತ್ತಿರುವ ಪೂ ಪಿ.ಎಂ.ಬಿರಾದಾರ ಚಾರಿಟೇಬಲ್ ಉಚಿತ ಡಯಾಲಿಸಿಸ್ ಸೆಂಟರ್ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಎಲ್ಲ ರಂಗಳಲ್ಲಿ ಮಹಿಳೆಯರು ಸಾಧನೆ ಮೆರೆಯುತ್ತಿದ್ದಾರೆ, ಪ್ರತಿಯೊಬ್ಬ ಯಶಸ್ವಿ ಮಹಿಳೆ ಹಿಂದೆ ಪುರುಷರ ಪಾತ್ರವೂ ಇದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ ಎಂದರು.
ಸ್ತ್ರೀರೋಗ ತಜ್ಞೆ ಡಾ.ನೀತಾ ಹರವಾಳ, ಸಂಚಾರ ಪಿಎಸ್ಐ ಭಾರತಿಬಾಯಿ ಧನ್ನಿ ಮಾತನಾಡಿ, ಹೆಣ್ಣು ಬಹುರೂಪಿ, ಎಲ್ಲ ತೆರನಾದ ನೋವು, ಸಂಕಷ್ಟ ನುಂಗಿ ಮನೆಗೆ ಒಳಿತು ಮಾಡುತ್ತಾಳೆ. ನಾಲ್ಕು ಗೋಡೆ ನಡುವಿನಿಂದ ಇಂದು ಮಹಿಳೆಯರು ಹೊರ ಬಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.
ನಾಲ್ಕು ಚಕ್ರ ಟ್ರಸ್ಟ್ ಅಧ್ಯಕ್ಷೆ ಮಾಲಾ ದಣ್ಣೂರ ಮತ್ತು ಕಾರ್ಯದಶರ್ಿ ಮಾಲಾ ಕಣ್ಣಿ ಉದ್ಘಾಟಿಸಿ, ರಕ್ತದಾನ ಮಾಡಿದರು. ಶರಣು ಪಪ್ಪಾ ಹಾಗೂ ತಂಡದವರು ರಕ್ತದಾನ ಶಿಬಿರ ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು.
ಡಯಾಲಿಸಿಸ್ ಸೆಂಟರ್ ರೂವಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಶರಣು ಪಪ್ಪ ನಿರೂಪಣೆ ಮಾಡಿದರು. ಜಿ-99, ಜಿ-55 ತಂಡದ ಸದಸ್ಯರಿಂದ ರಕ್ತದಾನ ನಡೆಯಿತು. ಶಿಬಿರದಲ್ಲಿ ಸುಮಾರು 97ಕ್ಕೂ ಹೆಚ್ಚಿನ ಜನರು ರಕ್ತದಾನ ಮಾಡಿದರು.
ಸುಮಾ ಪಪ್ಪಾ, ಮಮತಾ ಯಡ್ರಾಮಿ, ಜ್ಯೋತಿ ಕೋಟನೂರ, ಮೇಘನಾ ಮಠ, ಡಾ.ಶಿವಶೆಟ್ಟಿ, ಡಾ.ಕೈಸರ್,ರೇಷ್ಮಾ ಸ್ವಾಮಿ, ಪೂಣರ್ಿಮಾ, ಲಲಿತಾ ನಾಗೂರ, ಶೋಭಾ ದ ತ್ತಾತ್ರೇಯ, ಸೌಮ್ಯ ಐನಾಪುರ, ಸಂಗೀತಾ ಪ್ರಶಾಂತ ಗುಡ್ಡಾ, ರೇಣುಕಾ ಬಸವರಾಜ ಘತ್ತರಗಿ, ರಾಜು ನಾಗೂರ, ವಿನಯ , ಅರುಣ ಪಾಲ್ಗೊಂಡಿದ್ದರು. ಕಲಬುರಗಿ, ಮಹಿಳಾ ದಿನಾಚರಣೆ, ಡಾ.ಪ್ರತಿಮಾ ಕಾಮರೆಡ್ಡಿ, kalaburagi, womens day, Dr.Prateema Kamareddy,