

’
ಕೊಳ್ಳೇಗಾಲ: ಅಮರ ಶಿಲ್ಪಿ ಜಕಣಾಚಾರಿ, ಶ್ರೀ ವಿಶ್ವಕರ್ಮ ಹಾಗೂ ಕುವೆಂಪು ಜಯಂತಿ ಪ್ರತಿ ವರ್ಷವೂ ಬರಲಿದ್ದು, ಎಲ್ಲ ಮಹನೀಯರ ಜಯಂತಿಯನ್ನು ಒಂದೆಡೆ ಆಚರಿಸುವಂತೆ ಆಲೋಚಿಸಬೇಕು. ಇದ್ದರಿಂದ ಎಲ್ಲರಲ್ಲೂ ಒಗ್ಗಟ್ಟು ಮೂಡಲು ಸಾಧ್ಯವಾಗುತ್ತದೆ ಎಂದು ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಶ್ರೀ ವಿಶ್ವಕರ್ಮ, ಅಮರ ಶಿಲ್ಪಿ ಜಕಣಾಚಾರಿ ಹಾಗೂ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಇಡೀ ವಿಶ್ಚಕ್ಕೆ ರೂಪ ಕೊಟ್ಟವರು ವಿಶ್ವಕರ್ಮ ಶಿಲ್ಪಿಗಳಾಗಿದ್ದಾರೆ. ಕಳೆದ 2 ವರ್ಷದದಿಂದ ಇಚೆಗಷ್ಟೆ ಮಾತ್ರ ಬರವಣಿಗೆ ಇತಿಹಾಸದ ದಾಖಲೆಯನ್ನು ಕಾಣುತ್ತೇವೆ. ಆದರೆ ಅದಕ್ಕೂ ಹಿಂದೆ ಶಿಲ್ಪ ಕಲೆಗಳು ದಾಖಲೆಗಳು ಇತಿಹಾಸವನ್ನು ಸಾರುತ್ತಿದ್ದವು. ಆದ್ದರಿಂದ ಇಡೀ ವಿಶ್ವವನ್ನು ರೂಪಿಸಿದವರು ವಿಶ್ವಕರ್ಮರಾಗಿದ್ದಾರೆ ಹಾಗೂ ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಸಾರಿದ್ದಾರೆ ಎಂದರು.
ಉಪ ವಿಭಾಗಧಿಕಾರಿ ಗೀತಾ ಹುಡೇದ, ಬಿಇಒ ಚಂದ್ರ ಪಾಟೀಲ್ ಹಾಗೂ ವಿಶ್ವ ಸಮುದಾಯದ ಮುಖಂಡರು ಶ್ರೀ ವಿಶ್ವಕರ್ಮ, ಅಮರ ಶಿಲ್ಪಿ ಜಕಣಾಚಾರಿ ಹಾಗೂ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ರವಿ, ಕಾರ್ಯದರ್ಶಿ ಸಿದ್ದಪ್ಪ ಮುಖಂಡರಾದ ಶಿವಶಂಕರ್, ದೊರೆಸ್ವಾಮಿ, ನವೀನ್ ಕುಮಾರ್, ಉಮೇಶ್ , ಕಿರಣ್ ಕುಮಾರ್ ಮತ್ತಿತರಿದ್ದರು.