ಎಲ್ಲ ಭಾಷೆ ಪ್ರೀತಿಸಿ, ಕನ್ನಡವನ್ನು ಪೂಜಿಸಿ

vpt natya shale 1
ನಾಟ್ಯ ಮಯೂರಿ ನೃತ್ಯ ಶಾಲೆಯಿಂದ ವಿರಾಜಪೇಟೆ ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಮತ್ತು ವಿವಿಧ ಕ್ಷೇತ್ರಸಾಧಕರಿಗೆ ಕರುನಾಡ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
Published on

ವಿರಾಜಪೇಟೆ: ಎಲ್ಲ ಭಾಷೆ ಪ್ರೀತಿಸಿ, ಆದರೆ ಕನ್ನಡವನ್ನು ಪೂಜಿಸಿ ಎಂದು ಗಾಯಕ ಹಾಗೂ ನಟ ಶಶಿಧರ್ ಕೋಟೆ ಹೇಳಿದರು.

ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯಿಂದ ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರುನಾಡ ನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಪ್ರೀತಿ, ಭಕ್ತಿ, ನೀತಿ ಇರಬೇಕು. ಇದುವೇ ನಮ್ಮ ಭಾರತೀಯ ಸಂಸ್ಕೃತಿ ಎಂದರು.

ನಾಟ್ಯ ಮಯೂರಿ ನೃತ್ಯ ಶಾಲೆ ಸಂಸ್ಥಾಪಕಿ ಪ್ರೇಮಾಂಜಲಿ ಆಚಾರ್ಯ ಹಾಗೂ ಅವರ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದು, ಇದು ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.

ನಾಟ್ಯ ಮಯೂರಿ ನೃತ್ಯ ಶಾಲೆ ಸಂಸ್ಥಾಪಕಿ ವಿದುಷಿ ಪ್ರೇಮಾಂಜಲಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಾಪುರದ ಶನೈಶ್ಚರ ದೇಗುಲದ ಧರ್ಮದರ್ಶಿ ಡಾ.ಅಶೋಕ್ ಶೆಟ್ಟಿ, ರಂಗಕಲಾವಿದರಾದ ಬಾಸುಮ ಕೊಡಗು, ಸತೀಶ್ ಆಚಾರ್ಯ, ಮಹೋನಿ ಶೋಭಾ, ಡಾ. ಜ್ಯೋತಿ ಶ್ರೀನಿವಾಸ್, ದಿನಕರ್ ಶೆಟ್ಟಿ, ಸುನೀಲ್ ಮಂಜುನಾಥ್ ರೇವಂಕರ್, ಮಾದಂಡ ತಿಮ್ಮಯ್ಯ, ಪೂಜಾ ರವೀಂದ್ರ, ಶೋಭಾ, ಗಣಪತಿ ಹೋಬಳಿದಾರ್, ಸಿ.ಲಕ್ಷ್ಮಣ್, ಜ್ಞಾನ ರೈ, ಪೋಯಂಗಡ ಅಯ್ಯಪ್ಪ, ರವಿಚಂದ್ರನ್, ಮಹಿಮಾ ಕುಂದಾಪುರ, ಸತೀಶ್ ಕಲ್ಯಾಣಪುರ ಅವರಿಗೆ ಕರುನಾಡ ನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಲ್ಲದೆ, ಕರವೇ ಅನಿಲ್ ಕುಮಾರ್, ಸಾಹಿತಿಗಳಾದ ರಜಿತ ಕಾರ್ಯಪ್ಪ, ಪುಷ್ಪಲತಾ ಶಿವಪ್ಪ, ಶಿಕ್ಷಕರಾದ ಲವಿನ್ ಲೋಪೇಸ್, ವಿ.ಸಿ.ದೀಪಕ್, ಧರ್ಮದರ್ಶಿ ಬಾಬಾ ಶಂಕರ್, ನೃತ್ಯ ಕಲಾವಿದೆಯರಾದ ಎನ್ ನೌಶಿದ, ಕೆ.ಪಿ.ಶ್ರಾವ್ಯಾ, ಬಿ.ಬಿ.ಸಾನಿಧ್ಯ, ಸುರಕ್ಷಾ ವೈಲಾಯ, ಕೆ.ಪಿ.ನವ್ಯಾ, ಟಿ.ವಿ.ವೈಷ್ಣವಿ, ಸಂಗೀತಗಾರ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net