ಎಲ್ಲ ಬಸ್‌ಗಳು ಕೊಲ್ಹಾರ ಪಟ್ಟಣದ ನಿಲ್ದಾಣದ ಮೂಲಕ ಸಂಚರಿಸಲಿ

Bus, Kolhara Station, Vijayapura, Hubli, Bagalkote, Mangalore, KSRTC,
ಕೊಲ್ಹಾರ ತಹಸೀಲ್ದಾರ್ ಎಸ್.ಎಸ್. ನಾಯಕಲಮಠ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದವರು ಮನವಿ ಸಲ್ಲಿಸಿದರು. ಮಹಾಂತೇಶ ಗಿಡ್ಡಪ್ಪಗೋಳ, ರವಿ ಗೊಳಸಂಗಿ, ಸಂಗಯ್ಯ ಹಿರೇಮಠ, ಬಸವರಾಜ ಗಡ್ಡಿ, ರಾವತ ಬರಗಿ, ಮಹಾಂತೇಶ ಬುರ್ಲಿ, ಕಲ್ಮೇಶ ಹಿರೇಮಠ ಇತರರಿದ್ದರು.
Published on

ಕೊಲ್ಹಾರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗುವ ವಿಜಯಪುರ-ಹುಬ್ಬಳ್ಳಿ, ವಿಜಯಪುರ-ಬಾಗಲಕೋಟೆ, ವಿಜಯಪುರ ಮಂಗಳೂರು ಎಲ್ಲ ಬಸ್‌ಗಳು ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣಕ್ಕೆ ಹಾದು ಹೋಗುವಂತೆ ಕ್ರಮ ಕೈಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದವರು ತಹಸೀಲ್ದಾರ್ ಮೂಲಕ ಕೆಎಸ್‌ಆರ್‌ಟಿಸಿ ವಿಜಯಪುರ ಘಟಕದ ವ್ಯವಸ್ಥಾಪಕ ನಿರ್ದೇಶಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಕೊಲ್ಹಾರ ಪಟ್ಟಣ ತಾಲೂಕು ಕೇಂದ್ರವಾಗಿದ್ದು, ಎರಡು ಸುಸಜ್ಜಿತ ಬಸ್ ನಿಲ್ದಾಣಗಳನ್ನು ಹೊಂದಿದೆ. ಈಗಾಗಲೇ ಒಬ್ಬ ಕಂಟ್ರೋಲರ್ ಸಹ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲ ಬಸ್‌ಗಳು ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣದ ಮೂಲಕ ಸಮರ್ಪಕವಾಗಿ ಸಂಚರಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ಗಿಡ್ಡಪ್ಪಗೋಳ, ಕರವೇ ಚಾಲಕ ಒಕ್ಕೂಟದ ತಾಲೂಕು ಅಧ್ಯಕ್ಷ ಸಂಗಯ್ಯ ಹಿರೇಮಠ, ವಿಜಯ ಗಿಡ್ಡಪ್ಪಗೋಳ, ಬಸು ಗಡ್ಡಿ, ರಾವತ ಬರಗಿ ಹಾಗೂ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net