ಎಲ್ಲ ಬಗೆಯ ಬೆಳ್ಳಿ ಆಭರಣಗಳ ತಾಣ ವಿಜಯ್ ಸಿಲ್ವರ್ ಪ್ಯಾಲೇಸ್

21_HSN_06
Published on

ಹಾಸನ: ಬೆಳ್ಳಿ ಪದಾರ್ಥಗಳ ಮಾರಾಟಕ್ಕೆ ನಗರದಲ್ಲಿ ಮಾತ್ರವಷ್ಟೇ ಅಲ್ಲದೇ ಜಿಲ್ಲೆಯಾದ್ಯಂತ ವಿಜಯ್ ಸಿಲ್ವರ್ ಪ್ಯಾಲೇಸ್ ಹೆಸರುವಾಸಿಯಾಗಿದೆ. ನಗರದ ದೇವಿಗೆರೆ ಸರ್ಕಲ್, ಸುಭಾಶ್ ಚೌಕ ಬಳಿ 2019ರಲ್ಲಿ ವಿನಯ್ ಕೊಥಾರಿ ಎಂಬುವವರು ಈ ಅಂಗಡಿ ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಎಲ್ಲ ರೀತಿಯ 92.5 ಹಾಲ್‌ಮಾರ್ಕ್ ಹೊಂದಿರುವ ಬೆಳ್ಳಿ ಪದಾರ್ಥಗಳನ್ನು ಇಲ್ಲಿ ಮಾರಾಟ ಮಾಡಿಕೊಂಡು ಬರಲಾಗುತ್ತಿದೆ.

ಈ ಸಿಲ್ವರ್ ಪ್ಯಾಲೇಸ್‌ನಲ್ಲಿ ಎಲ್ಲ ರೀತಿಯ ಬೆಳ್ಳಿ ಪದಾರ್ಥಗಳು ದೊರೆಯುತ್ತವೆ. ಬೆಳ್ಳಿ ಜ್ಯುಯಲರಿಗಳು, ಆ್ಯಂಟಿಕ್ ಜ್ಯುಯಲರಿಗಳು, ಗೋಲ್ಡ್ ಪಾಲೀಶ್ ಜ್ಯುಯಲರಿಗಳು, ಕಾಲುಗೆಜ್ಜೆಗಳು, ಬೆಳ್ಳಿಯ ದೇವರ ವಿಗ್ರಹ, ಮೂರ್ತಿ, ಕಳಶ, ದೇವರ ಬೆಳ್ಳಿ ಫ್ರೇಮ್ ಫೋಟೋಗಳು, ಬೆಳ್ಳಿ ಚೊಂಬು, ತಟ್ಟೆ, ಲೋಟ ಹೀಗೆ ಎಲ್ಲ ಬಗೆಯ ಬೆಳ್ಳಿಯ ಪದಾರ್ಥಗಳು ಒಂದೇ ಸೂರಿನಡಿ ಲಭ್ಯವಿದೆ.

ಅಂಗಡಿಗೆ ನೂತನ ರೂಪ ಕೊಡುವ ಸಲುವಾಗಿ ಹೊಸ ವಿನ್ಯಾಸ ಹಾಗೂ ಆಕರ್ಷಕವಾಗಿ ನವೀಕರಣ ಮಾಡಲಾಗಿದೆ. ಈ ಹಿಂದೆಗಿಂತಲೂ ಈಗ ಅಂಗಡಿ ಹೊಸ ಸ್ವರೂಪದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಇಲ್ಲಿನ ವಿಶೇಷ ಅಂದರೆ ನಗರ ಪ್ರದೇಶದ ಗ್ರಾಹಕರು ಅಷ್ಟೇ ಅಲ್ಲದೇ ಜಿಲ್ಲೆಯ ಗ್ರಾಮೀಣ ಭಾಗದಿಂದಲೂ ಜನರು ಆಗಮಿಸಿ ಶುಭ ಸಮಾರಂಭ, ಇತರೆ ವಿಶೇಷ ಸನ್ನಿವೇಶಗಳಿಗಾಗಿ, ಉಡುಗೊರೆ ನೀಡಲು ಇಲ್ಲಿಗೆ ಆಗಮಿಸಿ ಬೆಳ್ಳಿ ಪದಾರ್ಥಗಳನ್ನು ಖರೀದಿಸುತ್ತಾರೆ. ಅದಕ್ಕೆ ಇಲ್ಲಿ ಸಿಗುವ ಗುಣಮಟ್ಟವೇ ಕಾರಣ. ಅಷ್ಟೇ ಅಲ್ಲದೇ ಇಲ್ಲಿ ಗ್ರಾಹಕರಿಗೆ ಇಷ್ಟವಾಗುವ ರೀತಿ ಆಭರಣಗಳನ್ನು ತಯಾರಿಸಿ ಕೊಡುತ್ತಾರೆ.

ಇಲ್ಲಿ ಬಂದು ಒಮ್ಮೆ ಖರೀದಿ ಮಾಡಿದ ಗ್ರಾಹಕರು ಇಲ್ಲಿ ಸಿಗುವ ಬಗೆ ಬಗೆಯ ಆಭರಣಗಳು, ಬೆಳ್ಳಿ ಪದಾರ್ಥಗಳಿಗೆ ಆಕರ್ಷಿತರಾಗಿ ಸಂತೋಷದಿಂದ ಖರೀದಿ ಮಾಡುತ್ತಾರೆ. ಜತೆಗೆ ತಮ್ಮ ಸ್ನೇಹಿತರು, ಬಂಧು ಬಳಗಕ್ಕೂ ಇಲ್ಲಿನ ವಿಶೇಷತೆಗಳ ಬಗ್ಗೆ ಹೇಳುತ್ತಾರೆ. ಹೀಗಾಗಿಯೇ ನಮಗೆ ಹೆಚ್ಚು ಗ್ರಾಹಕರು ಇಲ್ಲಿಗೆ ಬಂದು ತಮಗೆ ಬೇಕಾದ ಪದಾರ್ಥ ಖರೀದಿ ಮಾಡಿಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ ವಿಜಯ್ ಸಿಲ್ವರ್ ಪ್ಯಾಲೇಸ್ ಮಾಲೀಕರಾದ ವಿನಯ್ ಕೊಥಾರಿ ಅವರು.

ಬೆಳ್ಳಿ ಪದಾರ್ಥಗಳನ್ನು ಖರೀದಿ ಮಾಡುವ ಗ್ರಾಹಕರು ಒಮ್ಮೆ ಇಲ್ಲಿಗೆ ಭೇಟಿ ನೀಡಿ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿ ನಂತರ ಖರೀದಿ ಮಾಡಲಿ. ಏಕೆಂದರೆ ಗ್ರಾಹಕರು ಮೋಸ ಹೋಗುವುದು ಬೇಡ. ಬೇರೆ ಬೇರೆ ಅಂಗಡಿಗಳಿಗೂ ನಮ್ಮ ಅಂಗಡಿಗೂ ಪದಾರ್ಥಗಳನ್ನು ಹೊಲಿಕೆ ಮಾಡಿ ಉತ್ತಮವಾಗಿ ಇರುವೆಡೆ ಬೆಳ್ಳಿ ಪದಾರ್ಥ ಖರೀದಿ ಮಾಡಲಿ ಎನ್ನುತ್ತಾರೆ ವಿನಯ್ ಕೊಥಾರಿ.

ಹೆಚ್ಚಿನ ಮಾಹಿತಿಗಾಗಿ ವಿಜಯ್ ಸಿಲ್ವರ್ ಪ್ಯಾಲೇಸ್ ಮೊಬೈಲ್ ಸಂಖ್ಯೆ 9060133333 ಕರೆ ಮಾಡಿ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net