ಎಲ್ಲ ಜಿಲ್ಲೆಗಳಲ್ಲೂ ಮೇಳ ಆಯೋಜಿಸಿ: ಮುನಿರತ್ನ

Published on

ಮೈಸೂರು: ಎಲ್ಲ ಜಿಲ್ಲೆಗಳಲ್ಲೂ ಕೃಷಿ ಮೇಳ ಆಯೋಜಿಸಲು ಮೈಸೂರು ಮಾದರಿಯಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳದಲ್ಲಿ ಶುಕ್ರವಾರ ಸಂಜೆ ಅವರು ಮಾತನಾಡಿ, ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ನೇತೃತ್ವದ ಕೃಷಿ ಮೇಳ ರೈತ ಸಮುದಾಯಕ್ಕೆ ಅತ್ಯಂತ ಉಪಯುಕ್ತವಾಗಿದೆ. ಇಂತಹ ಮೇಳಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.
ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ರೈತರಿಗೆ ಸಮಗ್ರ ಮಾಹಿತಿಯ ಕೊರತೆ ಇದೆ. ಹಾಗಾಗಿ ಇಂತಹ ಮೇಳಗಳು ಆ ಕೊರತೆ ನೀಗಲಿವೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಮೇಳ ಮಾಡುವಂತಾಗಲಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net