ಎಲ್‌ಕೆಜಿ, ಯುಕೆಜಿ ಪ್ರಾರಂಭೋತ್ಸವ

oplus_0
ಸಿದ್ದಾಪುರ ಸಂತ ಅನ್ನಮ್ಮ ಶಾಲೆಯಲ್ಲಿ ಶೈಕ್ಷಣಿಕ ಪ್ರಾರಂಭೋತ್ಸವ ಆಯೋಜಿಸಲಾಗಿತ್ತು.
Published on

ಸಿದ್ದಾಪುರ: ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ಪ್ರಸಕ್ತ ಸಾಲಿನ ಎಲ್‌ಕೆಜಿ ಹಾಗೂ ಯುಕೆಜಿ (ಸಿಬಿ ಎಸ್‌ಇ) ತರಗತಿಯ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವವನ್ನು ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಪಾಲಕರೊಂದಿಗೆ ಆಗಮಿಸಿದ ಪುಟಾಣಿಗಳು ಶಿಕ್ಷಕರಿಗೆ ನಮಸ್ಕರಿಸಿ ಶಾಲಾ ಕೊಠಡಿ ಪ್ರವೇಶ ಮಾಡಿದರು.

ಮೊದಲ ದಿನವೇ ಶಾಲಾ ಮಕ್ಕಳಿಗೆ ಅಕ್ಕಿಯ ಮೇಲೆ ಅಕ್ಷರ ಬರೆಸಿ ಅಕ್ಷರ ಅಭ್ಯಾಸ ಮಾಡಲಾಯಿತು. ಶಿಕ್ಷಕರು ಶಿಸ್ತು, ಸಮಯ ಪಾಲನೆ, ಗೌರವ, ಪರಿಸರ ಕಾಳಜಿ, ಸುಚಿತ್ವ, ಆರೋಗ್ಯ, ಕ್ರೀಡಾ ಚಟುವಟಿಕೆಗಳ ಕುರಿತು ನೀತಿಪಾಠ ಹೇಳಿದರು.

ಸಂತ ನಮ್ಮ ಶಾಲೆ ವ್ಯವಸ್ಥಾಪಕ ಸಿಸ್ಟ್‌ರ್ ಮಾರ್ಜರಿ ಮಾತನಾಡಿ, ಶಿಕ್ಷಣದ ಮೂಲಕ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತೇವೆ. ಪಾಲಕರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದಾಗಬೇಕು. ಶಿಕ್ಷಣ ಬೆಳವಣಿಗೆಗೆ ಪೂರಕವಾಗಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಿಕ್ಷಣದಿಂದ ವಂಚಿತರಾಗದೆ ಶಾಲೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ಫಾದರ್ ಜೋಜಿ, ಪ್ರಾಂಶುಪಾಲೆ ಸಿಟ್ಟರ್ ಲ್ಯೆನಿಟ್, ಸಂಚಾಲಕರಾದ ಸಿಸ್ಟ್‌ರ್ ಅರ್ಪಿತಾ, ಗ್ರೇಸ್ ಲಿಮಾ ನಿರ್ವಾಣ ಸಮಿತಿಯ ಸದಸ್ಯರಾದ ಸಿಟ್ಟರ್ ಗ್ರೇಸ್ ಲಿಮಾ ಶಿಕ್ಷಕಿರಾದ ಲೆನಿ, ಸುನೀತಾ, ತೆರೇಸಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net