

ಕೆ.ಆರ್.ನಗರ: ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿರುವ ಸ್ವಾಮಿ ಅವರ ಸೇವೆ ಶ್ಲಾಘನೀಯ ಎಂದು ಭಾರತೀಯ ಜೀವ ವಿಮಾ ನಿಗಮದ ಕೆ.ಆರ್.ನಗರ ಶಾಖೆಯ ಹಿರಿಯ ವ್ಯವಸ್ಥಾಪಕ ಗೋಪಾಲಕೃಷ್ಣ ಸ್ವಾಮಿ ಹೇಳಿದರು.
ಪಟ್ಟಣದ ಭಾರತೀಯ ಜೀವವಿಮ ನಿಗಮದ ಕಚೇರಿಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆಯಿಂದ ನಿವೃತ್ತಿ ಹೊಂದಿದ ಸ್ವಾಮಿ ಅವರಿಗೆ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ತಾಲೂಕು ಸಂಘ ಹಾಗೂ ನೌಕರರು ಮತ್ತು ಸಿಬ್ಬಂದಿ ಇತ್ತೀಚೆಗೆ ಆಯೋಜಿಸಿದ್ದ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
29 ವರ್ಷಗಳ ಸೇವಾ ಅವಧಿಯಲ್ಲಿ ಪ್ರತಿನಿಧಿಗಳು ಮತ್ತು ಪಾಲಿಸಿದಾರರ ನಡುವೆ ಹಾಗೂ ಸಿಬ್ಬಂದಿ ಜತೆಗೂಡಿ ಪ್ರೀತಿ ವಿಶ್ವಾಸದಿಂದ ಕರ್ತವ್ಯ ನಿರ್ವಹಿಸಿ ವಿಮಾ ನಿಗಮಕ್ಕೆ ಒಳ್ಳೆಯ ಹೆಸರು ತರುವುದರ ಜತೆಗೆ ತಾವು ಸಹ ಒಬ್ಬ ಉತ್ತಮ ನೌಕರನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ವಿಶೇಷವಾಗಿದೆ ಎಂದರು.
ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎಚ್.ಪಿ.ರಮೇಶ್, ಸಂಘಟನಾ ಕಾರ್ಯದರ್ಶಿ ಡಿ.ಆರ್.ರಮೇಶ್, ತಾಲೂಕು ಸಂಘದ ಗೌರವ ಅಧ್ಯಕ್ಷ ಮೋಹನ್‌ರಾವ್, ಪ್ರಧಾನ ಕಾರ್ಯದರ್ಶಿ ಸಿ.ಬಿ.ಮುದ್ದುಕುಮಾರ್, ಸದಸ್ಯರಾದ ತಿಮ್ಮೇಗೌಡ, ಆರ್, ಶಿವರಾಜ್, ವಸಂತ್‌ಕುಮಾರ್, ಕಾಂತರಾಜ್, ಚೆಲುವರಾಜ್, ಶಾಖೆಯ ಉಪ ವ್ಯವಸ್ಥಾಪಕ ರಾಕೇಶ್, ಸುಧೀರ್, ನೌಕರರಾದ ಅಂಬರೀಶ್, ಸತ್ಯ ಎಲ್ಲಪ್ಪ, ನಾಗರಾಜ್, ಜವರೇಗೌಡ, ಗುಣಶೇಖರ ಸೇರಿದಂತೆ ಇನ್ನಿತರರು ಹಾಜರಿದ್ದರು.