ಎಲೆತೋಟದ ಮುಖ್ಯ ರಸ್ತೆಯ ಒತ್ತುವರಿ ತೆರವು

Ramdas
Published on

ಮೈಸೂರು: ಎಲೆತೋಟದ ಮುಖ್ಯ ರಸ್ತೆಯ ಒತ್ತುವರಿಯನ್ನು ಬುಧವಾರ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಒತ್ತುವರಿ ತೆರವುಗೊಳಿಸಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಸಾಕಷ್ಟು ಬಾರಿ ಒತ್ತಾಯ ಮಾಡಿದ್ದರು. ಈ ಮಾರ್ಗದಲ್ಲಿರುವ ಹಲವು ಅಂಗಡಿ ಮಾಲೀಕರು ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಅವರ ಮನವೊಲಿಸುವ ಮೂಲಕ ಒತ್ತುವರಿ ತೆರವುಗೊಳಿಸಲಾಯಿತು. ಜೆಸಿಬಿ ಯಂತ್ರ ಬಳಕೆ ಮಾಡಿಕೊಂಡು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

ಇದು ನಂಜನಗೂಡು-ಊಟಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತವೆ. ಈ ರಸ್ತೆಯು ದ್ವಿಪಥವನ್ನು ಹೊಂದಿದ್ದು, ಕೆಲವು ಕಡೆ ಒತ್ತುವರಿಯಿಂದ ದ್ವಿಪಥ ನಿರ್ಮಾಣ ಸಾಧ್ಯವಾಗಿ ರಲಿಲ್ಲ. ಒತ್ತುವರಿ ತೆರವಿನ ನಂತರ ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net