ಎಲೆಕ್ಟ್ರಿಕ್ ಅಂಗಡಿಯಲ್ಲಿ ಕಳ್ಳತನ

crime
Published on

ಮೈಸೂರು: ವಿಜಯನಗರದ 4ನೇ ಹಂತ ಆರ್‌ಎಂಪಿ ಬಡಾವಣೆಯ ಎಲೆಕ್ಟ್ರಿಕ್ ಮತ್ತು ಹಾರ್ಡ್‌ವೇರ್ ಅಂಗಡಿಯ ಬಾಗಿಲಿನ ಬೀಗ ಒಡೆದು ಒಂದು ಲಕ್ಷ ರೂ. ಮೊತ್ತದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

ಮಿಸ್ಟರ್ ಫಿಕ್ಸ್ ಇಟ್ ಹೋಂ ಸೆಲ್ಯೂಷನ್ ಎಂಬ ಅಂಗಡಿಯಲ್ಲಿ ಫೆ.16ರಂದು ಈ ದುಷ್ಕೃತ್ಯ ನಡೆದಿದೆ. ಎಲೆಕ್ಟ್ರಿಕ್ ವೈರ್‌ಗಳು, ಟ್ಯೂಬ್ ಲೈಟ್‌ಗಳು, ಎಲ್‌ಇಡಿ ಬಲ್ಬ್‌ಗಳು, ಡ್ರಿಲ್ಲಿಂಗ್ ಮಿಷನ್‌ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಲಾಗಿದೆ.

ಅಂಗಡಿ ಮಾಲೀಕ ಕಾರ್ಯಪ್ಪ ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net