ಎರ‌್ರಿತಾತನವರ ಮಹಾರಥೋತ್ಸವ

11 YERRISWAMY 05
Published on

ಬಳ್ಳಾರಿ : ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಶ್ರೀ ಎರ‌್ರಿತಾತನವರ ಮಹಾರಥೋತ್ಸವ ಜೂ.12ರಂದು ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ. ಜೂ.5ರಿಂದಲೇ ಜಾತ್ರಾ ಮಹೋತ್ಸವ ಅಂಗವಾಗಿ ಕಾರ್ಯಕ್ರಮ ಆರಂಭವಾಗಿವೆ ಎಂದು ಶ್ರೀಎರ‌್ರಿಸ್ವಾಮಿ ಜೀವಸಮಾಧಿ ಟ್ರಸ್ಟಅಧ್ಯಕ್ಷ ಬಾಳನಗೌಡ ಮತ್ತು ಶ್ರೀ ದಾಸೋಹ ಸೇವಾ ಸಂಘದ ಅಧ್ಯಕ್ಷ ಪಂಪನಗೌಡ ತಿಳಿಸಿದ್ದಾರೆ.
ಜೂ.5 ರಂದು ಬೆಳಿಗ್ಗೆ 6 ಗಂಟೆಯಿಂದಲೇ ನಂದಿ ಧ್ವಜಾರೋಹಣ ಮತ್ತು ಸಪ್ತಭಜನೆ ಕಾರ್ಯಕ್ರಮ ಆರಂಭವಾಗಿದೆ. ಜೂ.6ರಂದು ಸಂಜೆ ಬೆಳ್ಳಿ ರಥೋತ್ಸವ ಹಾಗೂ ಜೂ.11ರಂದು ಮಂಗಳವಾರ ಬಸವ ಉತ್ಸವ ಕಾರ್ಯಕ್ರಮ ನಡೆಯಿತು. ಜೂ.12ರಂದು ಬೆಳಿಗ್ಗೆ 6 ಗಂಟೆಗೆ ಸಪ್ತಭಜನೆ ಮುಕ್ತಾಯ ಕಾರ್ಯಕ್ರಮ ನಡೆಯಲಿದೆ. ಶ್ರೀಎರ‌್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ಕಮಿಟಿಯ ಆವರಣದಲ್ಲಿ ಎರ‌್ರಿತಾತನವರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟನೆ ಕಾರ್ಯಕ್ರಮ ಜೂ.12ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಉರವಕೊಂಡ ಗವಿಮಠ ಸಂಸ್ಥಾನದ ಡಾ.ಕರಿಬಸವರಾಜೇಂದ್ರ ಮಹಾಸ್ವಾಮಿಗಳು ಮಳಿಗೆ ಉದ್ಘಾಟನೆ ಮಾಡಲಿದ್ದಾರೆ. ಜೂ.12ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಮತ್ತು ಅಂದು ರಾತ್ರಿ 7 ಗಂಟೆಗೆ ಕರ್ಪೂರದ ಆರತಿ ಕಾರ್ಯಕ್ರಮ ನಡೆಯಲಿದೆ. ಜೂ.13ರಂದು ಸಂಜ 7 ಗಂಟೆಗೆ ಹೂವಿನರಥೋತ್ಸವ ಕಾರ್ಯಕ್ರಮ ನಂತರ ಬಾಣೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net