ಎರಡೂವರೆ ಕೋಟಿ ರೂಪಾಯಿ ಮೌಲ್ಯದ ಬ್ರೌನ್ ಶುಗರ್ ವಶ

Brown Sugar
Published on

ಕಾರವಾರ: ಎರಡೂವರೆ ಕೋಟಿ ರೂ. ಮೌಲ್ಯದ ಬ್ರೌನ್ ಶುಗರ್ ಅನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಂಕೋಲಾ ಸಮೀಪ ವಶಕ್ಕೆ ಪಡೆದಿದ್ದಾರೆ.

2 ಕೆಜಿ 600 ಗ್ರಾಂ ಬ್ರೌನ್ ಶುಗರ್ ಇರುವ ಎರಡು ಕಾರು ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಬರುತ್ತಿತ್ತು. ಈ ವೇಳೆ ಪೊಲೀಸರು ತಪಾಸಣೆ ಮಾಡಿದಾಗ ಬ್ರೌನ್ ಶುಗರ್ ಇರುವುದು ಪತ್ತೆಯಾಗಿದೆ. ಮಾದಕ ವಸ್ತು ಸಾಗಿಸುತ್ತಿದ್ದ ಸಿದ್ದಾಪುರದ ವೀರಭದ್ರ ಸುಬ್ರಾಯ ಹೆಗಡೆ, ಪ್ರವೀಣ ಮಂಜುನಾಥ ಭಟ್, ಅಂಕೋಲಾ ಕಲ್ಲೇಶ್ವರದ ಚಂದ್ರಹಾಸ ದಯಾನಂದ ಗುನಗಾ ಹಾಗೂ ನಾರಾಯಣ ರಾಮಕೃಷ್ಣ ಭಾಗ್ವತ್ ಅವರನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net