ಎರಡು ಪಲ್ಟಿ ಹೊಡೆದ ಕ್ರೂಸರ್​

WhatsApp Image 2023-07-16 at 9.48.30 PM
Published on


ನಾಲವಾರ: ಕಾರು ಹಾಗೂ ಕ್ರೂಷರ್ ಮಧ್ಯೆ ಡಿಕ್ಕಿ ಸಂಭವಿಸಿ, 10 ಜನರು ಗಾಯಗೊಂಡ ಘಟನೆ ವಾಡಿ ಸಮೀಪದ ಲಾಡ್ಲಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದೆ.

ಕ್ರೂಷರ್‌ನಲ್ಲಿ ವಿಜಯಪುರದಿಂದ 13 ಜನರು ಪಯಣ ಮಾಡುತ್ತಿದ್ದು, ಡಿಕ್ಕಿಯ ರಭಸಕ್ಕೆ ಮೂವರು ಗಂಭೀರ ಗಾಯಗೊಂಡಿದ್ದಾರೆ. ಎಲ್ಲರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಹೆಚ್ಚಿನ ಟ್ರೀಟ್‌ಮೆಂಟ್‌ಗಾಗಿ ಕಲಬುರಗಿಗೆ ಕಳಿಸಲಾಗಿದೆ. ಕಾರಿನಲ್ಲಿದ್ದವರು ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯಪುರದಿಂದ 13 ಜನರು ಕ್ರೂಷರ್‌ನಲ್ಲಿ ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾಕ್ಕೆ ಬಂದಿದ್ದರು. ದರ್ಶನ ಮುಗಿಸಿ ಇಲ್ಲಿಂದ ಆಂಧ್ರ ಪ್ರದೇಶದ ಕರ್ನೂಲ್‌ಗೆ ಹೊರಟಿದ್ದರು. ವಾಡಿ ಬಳಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕ್ರೂಷರ್ ಟೈಯರ್ ಎಕ್ಸಲ್ ಮುರಿದು, 2 ಪಲ್ಟಿ ಹೊಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net