ಎರಡು ದಿನದಿಂದ ರಸ್ತೆ ಬದಿಯೇ ಕ್ವಾರಂಟೈನ್

0905 KML-02
Published on

ಕಮಲಾಪುರ : ಮುಂಬೈನಿಂದ ಬಂದು ಎರಡು ದಿನವಾದರೂ ಸೌಲಭವಿಲ್ಲದೇ ರಾಜ್ಯ ಹೆದ್ದಾರಿ ಬಳಿಯೇ ವಾಸವಾಗಿರುವ ತಾಲೂಕಿನ ಭಗವಾನ ತಾಂಡಾ ನಿವಾಸಿಗಳಿಗೆ ಹೆದ್ದಾರಿ ಬದಿಯೇ ಕ್ವಾರಂಟೈನ್ ಕೇಂದ್ರವಾಗಿದೆ.
ಓಕಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಭಗವಾನ ತಾಂಡಾದ ನಿವಾಸಿಗಳು ಕೂಲಿ ಕೆಲಸಕ್ಕಾಗಿ ಮುಂಬೈಗೆ ಹೋಗಿದ್ದರು.ಲಾಕ್ಡೌನ್ ಗೆ ಸಿಲುಕಿ ಕೆಲಸವಿಲ್ಲದೇ ಒಂದೂವರೆ ತಿಂಗಳಿಂದ ಪರದಾಡುತ್ತಿದ್ದೇವೆ, ಇದ್ದ ಹಣ ಸಹ ಖಾಲಿಯಾಗಿ ಹೊಟ್ಟೆಗೆ ಊಟವು ದೊರಕದೆ ಕಾಲು ನಡಿಗೆ ಮೂಲಕ ಇಲ್ಲಿಗೆ ಆಗಮಿಸಿ ಎರಡು ದಿನವಾದರೂ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ, ಶಾಲೆ ಕಟ್ಟಡ ತಾಂಡಾದ ಮಧ್ಯದಲ್ಲಿರುವುದರಿಂದ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಅಸಾಧ್ಯವಾಗಿದೆ. ಬೇರೆ ಕಡೆ ಉಳಿಯಲು ಯಾವ ವ್ಯವಸ್ಥೆ ಮಾಡಿ ಕೊಟ್ಟಿಲ್ಲ, ನಿನ್ನೆ ದಿನ ಮಳೆ ಬಂದು ಇಲ್ಲಿಯೇ ನೆನೆದಿದ್ದೇವೆ. ಜಿಲ್ಲಾಧಿಕಾರಿ ಬರುವವರೆಗೆ ಇಲ್ಲಿಂದ ಕದಲುವದಿಲ್ಲ ಎಂದು ಹಠ ಹಿಡಿದರು.
ಕಾಂಗ್ರೆಸ್ ಮುಖಂಡ ರವಿ ಚವ್ಹಾಣ ಸ್ಥಳಕ್ಕೆ ಆಗಮಿಸಿ ಪಿಡಿಒಗೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಂತರ ಜನತೆಯನ್ನು ಭೇಟಿಯಾಗಿ ಭಗವಾನ್ ತಾಂಡಾದ ಹೊರ ವಲಯದಲ್ಲಿರುವ ಕಟ್ಟಡದಲ್ಲಿರಿ, ಯಾವುದೇ ರೀತಿಯ ಸಹಾಯಕ್ಕೆ ನಾನು ಬದ್ಧ ಎಂದು ಭರವಸೆ ನೀಡಿದಾಗ ಒಪ್ಪಿಕೊಂಡು ಧರಣಿ ಮುಕ್ತಾಯಗೊಳಿಸಿದರು.ಕಂದಾಯ ನಿರೀಕ್ಷಕ ರಘುನಂದನ್ ದ್ಯಾಮಿಣಿ, ಕಾಂಗ್ರೆಸ್ ಮುಖಂಡ ರವೀಂದ್ರ ಚವ್ಹಾಣ, ಪಿಡಿಒ ಅನುರಾಧಾ, ಯುವ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಹರಸೂರ, ಆನಂದ ವಾರಿಕ್ , ತಯ್ಯಬ್ ಚೌಧರಿ, ವೆಂಕಟೇಶ ರಾಠೋಡ್, ಇಫರ್ಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net