ಎರಡು ದಿನಗಳ ಸಂಸ್ಕಾರ ಬಾಲ ಬೋಧೆ ಶಿಬಿರ

ಎರಡು ದಿನಗಳ ಸಂಸ್ಕಾರ ಬಾಲ ಬೋಧೆ ಶಿಬಿರ
Published on

ಹಾಸನ: ನಗರದ ಕಾಳಿಕಾಂಬಾ ಕಮಠೇಶ್ವರ ದೇವಾಲಯದಲ್ಲಿ ಜಿ. ವೇದಿಕ್ ಸಂಸ್ಥೆ, ಗಾಯತ್ರಿ ದೇವಿ ಜ್ಯೋತಿಷ್ಯ ಮತ್ತು ಪುರೋಹಿತ ಮಂದಿರ ವತಿಯಿಂದ ಮಕ್ಕಳಿಗೆ ಎರಡು ದಿನಗಳ ಸಂಸ್ಕಾರಬಾಲ ಬೋಧೆ ಶಿಬಿರ ಆರಂಭಿಸಲಾಗಿದೆ.
ಭಾನುವಾರ ಶಿಬಿರಕ್ಕೆ ಚಾಲನೆ ನೀಡಿದ್ದು ಪ್ರತಿದಿನ ಸಂಜೆ 4 ರಿಂದ 6ರ ವರೆಗೆ ತರಗತಿ ನಡೆಯಲಿದೆ. ಆರು ವರ್ಷ ಮೇಲ್ಪಟ್ಟ ಮಕ್ಕಳು ಪ್ರವೇಶ ಪಡೆಯಬಹುದು.
ಜಿ. ವೇದಿಕ್ ಸಂಸ್ಥೆಯ ಮುಖ್ಯಸ್ಥ ಪ್ರದೀಪ ಶರ್ಮ ಅವರು ಮಾತನಾಡಿ, ಸಂಸ್ಕಾರಯುತ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವುದೇ ಶಿಬಿರದ ಉದ್ದೇಶವಾಗಿದೆ. ಶ್ಲೋಕ, ವೇದ ಉಪನಿಷತ್ತುಗಳ ಕಲಿಕೆ ಇರಲಿದೆ. ಮಕ್ಕಳು ಜೀವನ ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಕಲಿಸಿಕೊಡಲಾಗುತ್ತದೆ. ಶಿಬಿರದ ಕೊನೆಯಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.
ದೇವಾಲಯದ ಕಾರ್ಯದರ್ಶಿ ಕೇಶವ್ ಪ್ರಸಾದ್, ಕಲ್ಲೇಶಾಚಾರ್ಯ, ಬ್ರಹ್ಮಾನಂದ, ಮೋಹನ್, ಕಲಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net