ಎರಡು ದಿನಗಳ ಕಾಲ ಬಾರಿ ಮಳೆ ಸಾಧ್ಯತೆ

13-SDMOCT-06
Published on

ಸೇಡಂ : ಕಲಬುರಗಿ ಜಿಲ್ಲೆಯಾದ್ಯಂತ ಬಾರಿ ಮಳೆಯಾಗುವ ಸಂಭವವಿದ್ದು, ಜಿಲ್ಲಾಡಳಿತದಿಂದ ರೆಡ್ ಅಲರ್ಟ್​ ಘೋಷಣೆಯಾದ ಕಾರಣ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ತಾಲೂಕಿನ ಜನತೆ ಎಚ್ಚರಿಕೆಯಿಂದಿರಲು ಮನವಿ ಮಾಡಿದ್ದಾರೆ.
ಈ ಕುರಿತು ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುತರ್ು ಸಭೆ ನಡೆಸಿದ ಅವರು, ಮುಂದಿನ ಎರಡು ದಿನಗಳ ಕಾಲ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಭಾರಿ ಮಳೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ನೀರು ಹರಿಯುವ ರಸ್ತೆಗಳು ಮತ್ತು ಬ್ರಿಡ್ಜ್ಗಳನ್ನು ದಾಟಲು ವಾಹನ ಸವಾರರು ಸಾಹಸ ಮಾಡಬಾರದು. ಮಳೆಯಿಂದ ಸಂಕಷ್ಟ ಎದುರಿಸುವವರಿಗಾಗಿಯೇ 24 ಗಂಟೆಗಳ ಸಹಾಯವಾಣಿ ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ: 08441-276184, ಮೊಬೈಲ್ ಸಂಖ್ಯೆ: 9741680444, 6361376408 ಅಥವಾ 9986996632 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net