ಎರಡು ದಶಕದ ನಂತರ ಬಿಸಯೂಟ ಆರಂಭ

25ydg05
Published on


ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಚನ್ನೂರು ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದೆರಡು ದಶಕದಿಂದ ಸ್ಥಗಿತಗೊಂಡಿದ್ದ ಬಿಸಿಯೂಟ ಯೋಜನೆ ಶಿಕ್ಷಣ ಇಲಾಖೆ ಅಕಾರಿಗಳ ಮಧ್ಯಸ್ಥಿತಿಕೆಯಿಂದ ಚಾಲನೆ ಸಿಕ್ಕಿದೆ.

2002ರಲ್ಲಿ ಬಿಸಿಯೂಟ ಯೋಜನೆ ಆರಂಭಗೊಂಡ ಮೊದಮೊದಲ್ಲಿ ಮಾತ್ರ ಇಲ್ಲಿನ ಮಕ್ಕಳಿಗೆ ಮಧ್ಯಾಹ್ನದ ಊಟ ಸಿಗುತ್ತಿತ್ತು. ಆದರೆ, ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ಕಳೆದ ಎರಡು ದಶಕದಿಂದ ಸ್ಥಗಿತಗೊಂಡಿತ್ತು. ಕಳೆದ ವಾರ ಶಾಲೆಗೆ ಕ್ಷೇತ್ರ ಶಿಕ್ಷಣಾಕಾರಿ ಚಂದ್ರಕಾಂತ ಕೊಣ್ಣೂರು, ಅಕ್ಷರ ದಾಸೋಹ ಇಲಾಖೆ ಅಕಾರಿ ಈಶ್ವರ ನೀರಡಗಿ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದ್ದರು.

ಸಧ್ಯ ಎನ್ಜಿಒ ಒಂದರ ಮೂಲಕ ಶಾಲೆಗೆ ನಿತ್ಯ ಬಿಸಿಯೂಟ ಸರಬರಾಜು ಮಾಡುತ್ತಿದ್ದು ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಶಾಲೆಗೆ ಶುಕ್ರವಾರ ಭೇಟಿ ನೀಡಿದ್ದ ಬಿಇಒ ಕೊಣ್ಣೂರು ಹಾಗೂ ಇತರೆ ಅಕಾರಿಗಳು ಮಕ್ಕಳೊಂದಿಗೆ ಊಟ ಸವಿದರು. ಮಕ್ಕಳಿಗೆ ಅಕ್ಷರ ದಾಸೋಹದ ಮೂಲಕ ಕಲಿಕೆಗೆ ಉತ್ತಮ ಪ್ರೋತ್ಸಾಹ ಸಾಧ್ಯ. ಇದರಿಂದಾಗಿ ದಾಖಲಾತಿ ಹೆಚ್ಚಳವಾಗಲಿದೆ ಎಂದರು.

ತಾಲೂಕು ಅಕ್ಷರ ದಾಸೋಹ ಅಕಾರಿ ಸೂರ್ಯವಂಶಿ, ಜಿಲ್ಲಾ ಸಮನ್ವಯ ಅಕಾರಿ ಚಂದ್ರಶೇಖರ, ಗ್ರಾಮದ ಯಮನಪ್ಪ ಕಟ್ಟಿಮನಿ, ಬಸವರಾಜ ಚನ್ನೂರು, ಸಿಆರ್ಪಿ ಬಸವರಾಜ ದಳವಾಯಿ, ಮುಖ್ಯಗುರು ಸಿದ್ದಪ್ಪ ಹಾಗೂ ಪೋಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net