ಎರಡು ಗಂಟೆ ಸ್ಟೇಷನ್‌ನಲ್ಲೇ ನಿಂತ ರೈಲು!

11 8 SBD 1
Published on

ಶಹಾಬಾದ್: ಎರಡು ಗಂಟೆಯಾದರೂ ನಿಲ್ದಾಣದಿಂದ ರೈಲು ಬಿಡದಿರುವುದರಿಂದ ಬೇಸತ್ತ ಪ್ರಯಾಣಿಕರು ಟ್ರೇನ್ ಲೋಕೋ ಪೈಲಟ್ (ಚಾಲಕ)ನನ್ನು ತರಾಟೆಗೆ ತೆಗದುಕೊಂಡ ಪ್ರಸಂಗ ಶುಕ್ರವಾರ ಬೆಳಗ್ಗೆ ವಾಡಿ ಜಂಕ್ಷನ್‌ನಲ್ಲಿ ನಡೆಯಿತು.

ರಾಯಚೂರು-ವಿಜಯಪುರ ಪ್ಯಾಸೆಂಜರ್ ನಿಗದಿತ ಸಮಯ ಬೆಳಗ್ಗೆ 9.15ಕ್ಕೆ ವಾಡಿಗೆ ಬಂದಿದ್ದು, 9.45ಕ್ಕೆ ಹೊರಡಬೇಕಾಗಿತ್ತು. ಆದರೆ ಎರಡು ತಾಸಾದರೂ ನಿಲ್ದಾಣದಿಂದ ಕದಲಲಿಲ್ಲ. ಕಾದು-ಕಾದು ಸುಸ್ತಾಗಿದ್ದ ಪ್ರಯಾಣಿಕರು ಆಕ್ರೋಶಗೊಂಡು ಲೋಕೋ ಪೈಲಟ್ ಹತ್ತಿರ ಹೋಗಿ ತರಾಟೆಗೆ ತೆಗೆದುಕೊಂಡರು.

ನಾವು ಆಸ್ಪತ್ರೆ, ಕಾಲೇಜು ಇತರ ಕೆಲಸಗಳಿಗೆ ಹೋಗಬೇಕಿದೆ. ನಿಮಗಿಷ್ಟ ಬಂದAತೆ ಟ್ರೇನ್ ನಿಲ್ಲಿಸಿದರೆ ಹೇಗೆ? ಕಿಂಚಿತ್ತಾದರೂ ಸಮಯಪ್ರಜ್ಞೆ ಬೇಕಲ್ಲವೆ? ಟ್ರೇನ್ ಹೋಗುವುದಿಲ್ಲ ಎಂದಾದರೂ ಹೇಳಿದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಕಿಡಿಕಾರಿದರು. ಕೆಲಕಾಲ ಪ್ರಯಾಣಿಕರು ಮತ್ತು ಚಾಲಕರ ಮಧ್ಯೆ ವಾಗ್ವಾದ ನಡೆಯಿತು.

ಲೋಕೋ ಪೈಲಟ್ ಪ್ರತಿಕ್ರಿಯಿಸಿ, ನಾನು ನಿಮಗೆ ಯಾವುದೇ ಉತ್ತರ ಕೊಡುವುದಿಲ್ಲ. ಸದ್ಯ ರೆಡ್ ಸಿಗ್ನಲ್ ಇದ್ದು, ಹಸಿರು ಸಿಗ್ನಲ್ ನೀಡಿದಾಗಲೇ ರೈಲು ಹೊರಡಲಿದೆ. ನೀವು ನನ್ನ ಬದಲು ಸ್ಟೇಷನ್ ಮಾಸ್ಟರ್ ಅವರಲ್ಲಿ ವಿಚಾರಿಸಿ ಎಂದು ಹೇಳಿದರು. ಪ್ರಯಾಣಿಕರ ಆಕ್ರೋಶ ಕಂಡ ರೈಲ್ವೆ ಅಧಿಕಾರಿಗಳು ಮಧ್ಯಾಹ್ನ 12ಕ್ಕೆ ರೈಲು ಚಲಿಸಲು ಸಿಗ್ನಲ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net