ಎರಡು ಕೊಲೆ ಯತ್ನ ಪ್ರಕರಣ ಏಳು ಮಂದಿ ಬಂಧನ

IMG-20210430-WA0028
Published on

ಮಂಗಳೂರು: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಇಬ್ಬರ ಕೊಲೆ ಯತ್ನ ನಡೆಸಿದ ಏಳು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾರಿಪಳ್ಳದ ಅಬ್ದುಲ್ ಜಬ್ಬಾರ್, ಫರಂಗಿಪೇಟೆಯ ನಝೀರ್ ಅಹ್ಮದ್, ಮಂಗಳೂರು ಪರಿಸರದ ಬಿಲಾಲ್, ಇಬ್ರಾಹಿಂ ಶಾಕೀರ್, ಮೊಹಮ್ಮದ್ ನಿಹಾಲ್, ಅಬ್ಬಾಸ್, ಮೊಹಮ್ಮದ್ ಅತಿಂ ಬಂಧಿತರು.

2020 ನ. 11ರಂದು ಕಂದಾವರ ಮಸೀದಿ ಬಳಿ ಅಬ್ದುಲ್ ಅಜೀಜ್ ಅವರು ನಡೆದುಕೊಂಡು ಹೋಗುತ್ತಿದ್ದಾಗ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ಆ ಬಳಿಕ ನ. 15ರಂದು ಅಬ್ದುಲ್ ಅಜೀಜ್ ಅವರು ಚಿಕಿತ್ಸೆ ಪಡೆಯುತ್ತಿದ್ದ ಯುನಿಟಿ ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ಅವರ ಅಳಿಯ ಮಕ್ದೂಮ್ ಅವರಿಗೂ ತಲವಾರ್ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net