ಎರಡು ಕುಟುಂಬಗಳು ಸ್ಥಳಾಂತರ

TKE 2 (AC)
ತರೀಕೆರೆ ತಾಲೂಕಿನ ಎ.ರಂಗಾಪುರ ಗ್ರಾಮಕ್ಕೆ ಎಸಿ ಎನ್.ವಿ.ನಟೇಶ್ ಭೇಟಿ ನೀಡಿದರು. ಇ.ಟಿ.ಕಾಂತಕುಮಾರ್‌ನಾಯ್ಕ, ಧನಂಜಯ, ಅರುಣ್‌ಕುಮಾರ್, ವಾಸು ಇತರರಿದ್ದರು.
Published on

ತರೀಕೆರೆ: ಮೂರು ದಿನಗಳಿಂದ ರಾತ್ರಿ ಹೊತ್ತು ಸುರಿಯುತ್ತಿರುವ ಮಳೆಯಿಂದ ಸಮಸ್ಯೆ ಎದುರಿಸುತ್ತಿರುವ ಎ.ರಂಗಾಪುರ ಗ್ರಾಮಕ್ಕೆ ಮಂಗಳವಾರ ಎಸಿ ಎನ್.ವಿ.ನಟೇಶ್ ವಿವಿಧ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕೆರೆ ಹೊಸಳ್ಳಿ ನಾಲೆ ಮೂಲಕ ಹರಿದುಬಂದು ಎ.ರಂಗಾಪುರ ಗ್ರಾಮದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿರುವುದನ್ನು ಗಮನಿಸಿದ ಎಸಿ, ಸಂತ್ರಸ್ತರನ್ನು ಸ್ಥಳಾಂತರಿಸಿ ವಿವಿಧ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಸಿ ಸೂಚನೆಯಂತೆ ಅಧಿಕಾರಿಗಳು ಎ.ರಂಗಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ತಗ್ಗು ಪ್ರದೇಶದ ಎರಡು ಕುಟುಂಬಗಳನ್ನು ಸ್ಥಳಾಂತರಿಸಿ ಊಟದ ವ್ಯವಸ್ಥೆ ಮಾಡಿದರು.

ಗ್ರಾಪಂ ಅಧ್ಯಕ್ಷ ಇ.ಟಿ.ಕಾಂತಕುಮಾರ್‌ನಾಯ್ಕ, ಗ್ರಾಮ ಆಡಳಿತಾಧಿಕಾರಿ ಧನಂಜಯ, ತಾಲೂಕು ಸರ್ವೇಯರ್ ಅರುಣ್‌ಕುಮಾರ್, ಗ್ರಾಪಂ ಪ್ರಥಮ ದರ್ಜೆ ಸಹಾಯಕ ವಾಸು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net